ಬೆಳಗಾವಿ- ಗಾಂಜಾ ,ಪನ್ನೀ ಸೇರಿದಂತೆ ಇತರ ಮಾದಕ ವಸ್ತುಗಳ ಮಾರಾಟದ ವಿರುದ್ಧ ಬೆಳಗಾವಿ ಪೋಲೀಸರು ಸಮರ ಸಾರಿದ್ದಾರೆ ತನ್ನ ಲವರ್ ಜೊತೆ ಮುಂಬಯಿ ಯಿಂದ ಪನ್ನಿ ತಂದು ಬೆಳಗಾವಿಯ ಹುಡುಗರಿಗೆ ಪನ್ನೀ ಹುಚ್ಚು ಹಿಡಿಸಿದ್ದ ಪ್ರಿಯಾ ಡಾನ್ ಮತ್ತು ಅವಳ ಲವರ್ ನನ್ನು ಹಿಡಿದು ಜೈಲಿಗೆ ಕಳಿಸುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ
ಕಳೆದ ಎರಡು ವರ್ಷದಿಂದ ನಾಝು ಮುಲ್ಲಾ ಎಂಬ ಯುವಕನಿಗೆ ಗಾಂಜಾ ಹುಚ್ಚು ಹಿಡಿಸಿ ನಂತರ ಅವನ ಜೊತೆ ಲವ್ ಮಾಡಿ ಆತನ ಜೊತೆ ಸೇರಿಕೊಂಡು ಬೆಳಗಾವಿಯಲ್ಲಿ ಗಾಂಜಾ ವ್ಯಾಪಾರ ನಡೆಸಿದ್ದ ಪ್ರಿಯಾ ಡಾನ್ ಗಾಂಜಾ ಮಾರಾಟದ ಜೊತೆಗೆ ಪನ್ನೀ ಮಾರಾಟದ ಜಾಲವನ್ನು ಬೆಳಗಾವಿಗೆ ತಂದಿದ್ದೇ ಈ ಪ್ರಿಯಾ ಡಾನ್
ಮಾರ್ಕೆಟ್ ಎಸಿಪಿ ನಾರಾಯಣ ಭರಮನಿ ಗಾಂಜಾ ಮತ್ತು ಪನ್ನೀ ಮಾರಾಟದ ವಿರುದ್ಧ ಸಮರ ಸಾರಿದ್ದು ಫೋರ್ಟ್ ರಸ್ತೆ, ಕಸಾಯಿ ಗಲ್ಲಿ ಸೇರಿದಂತೆ ಇತರ ಭಾಗಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖದೀಮರನ್ನು ಬಂಧಿಸಿದ್ದು ಈಗ ಅವರ ನೇತ್ರತ್ವದಲ್ಲೇ ಪ್ರಿಯಾ ಡಾನ್ ಅವಳನ್ನು ಇಂದು ಮಧ್ಯಾಹ್ನ ಬಂಧಿಸಿ ಗಾಂಜಾ ಮತ್ತು ಪನ್ನೀ ಮಾರಾಟದ ಜಾಲವನ್ನು ಜಾಲಾಡಿಸಿದ್ದು ಬಂಧಿತ ಪ್ರಿಯಾ ಡಾನ್ ಳನ್ನು ಮತ್ತೆ ಕಸ್ಟಡಿಗೆ ತೆಗೆದುಕೊಂಡ ಪನ್ನೀ ಜಾಲದ ಖದೀಮರಿಗೆ ಹಿಡಿಮುರಿ ಕಟ್ಟಲಿದ್ದಾರೆ
ಬೆಳಗಾವಿಯಲ್ಲಿ ಗಾಂಜಾ ಮತ್ತು ಪನ್ನೀ ಚಟಕ್ಕೆ ಹೈಸ್ಕೂಲು ಮತ್ತು ಕಾಲೇಜು ವಿಧ್ಯಾರ್ಥಿ ಗಳೇ ಬಲಿಯಾಗುತ್ತಿದ್ದು ಈ ಕುರಿತು ಬೆಳಗಾವಿ ಪೋಲೀಸರು ಸಿರೀಯಸ್ ಆಗಿದ್ದಕ್ಕೆ ಬೆಳಗಾವಿಯ ಮಾರ್ಕೇಟ್ ಪೋಲೀಸರಿಗೊಂದು ಬೆಳಗಾವಿ ಸುದ್ಧಿಯ ಸಲಾಂ…..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ