ಪೊಲೀಸ್ ಮಾಧ್ಯಮ ನಡುವೆ ತುರುಸಿನ ಕ್ರಿಕೇಟ್ ಪಂದ್ಯ:
ಬೆಳಗಾವಿ: ಬೆಳಗಾವಿ ಜಿಮ್ಖಾನಾ ಮೈದಾನದಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಮತ್ತು ಪ್ರೆಸ್ ಲೆವೆನ್ ತಂಡಗಳ ಮಧ್ಯೆ ತುರುಸಿನ ಕ್ರಿಕೇಟ್ ಪಂದ್ಯಗಳು ಪ್ರಾರಂಭವಾದವು.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲೀಸ್ ತಂಡ ಮೊದಲ ಓವರ್ ನಲ್ಲೇ ಟಿವಿ ಲೆವೆನ್ ಎದುರು ಎರಡು ವಿಕೇಟ್ನೊಂದಿಗೆ ಮಂಡಿಯೂರಿತು.
ಪೊಲೀಸ್ ತಂಡದ ನಾಯಕ ಡಿಸಿಪಿ ಅಮರನಾಥರೆಡ್ಡಿ ಹಾಗೂ ಟಿವಿ ಲೆವೆನ್ ತಂಡಕ್ಕೆ ಪಬ್ಲಿಕ್ ಟಿವಿ ಕರಸ್ಪಾಂಡಂಟ್ ದಿಲೀಪ ಕುರಂದವಾಡೆ, ಪ್ರೆಸ್ ಲೆವೆನ್ ನಾಯಕರಾಗಿ ರಾಜ್ ಹಿರೇಮಠ ಪಂದ್ಯಗಳನ್ನು ನಿರ್ವಹಿಸಿದರು.
ಪೊಲೀಸ್ ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಪಂದ್ಯ ವೀಕ್ಷಿಸಿದರು.
ಎಸಿಪಿ ಗುರುಶಾಂತಪ್ಪ, ಸಿಪಿಐ ಡಿ.ಸಿ. ಲಕ್ಕನ್ನವರ, ಜಾವೇದ ಮುಶಾಪುರಿ, ಜ್ಯೋತಿರ್ಲಿಂಗ ಹೊನಕಟ್ಟಿ, ಯು. ಎಚ್. ಸಾತೇನಹಳ್ಲಿ, ಶ್ರೀಕಾಂತ ಕುಬಕಡ್ಡಿ, ವಿಲಾಸ ಜೋಶಿ, ಶಂಕರ ಮಾರಿಹಾಳ, ಶಿವಾನಂದ ಚಿಕ್ಕಮಠ, ಭೈರೊಬಾ ಕಾಂಬಳೆ, ಪಾರೆಶ ಭೊಸಲೆ, ರವಿ ಚೌಗುಲೆ, ಸುನೀಲ ಪಾಟೀಲ, ಅನೀಲ ಕಾಜಗಾರ, ಪ್ರಭು ಪಾಟೀಲ ಇನ್ನಿತರರು ಉಪಸ್ಥಿತರಿದ್ದರು. ಪಂದ್ಯಗಳು ಸಂಜೆವರೆಗೆ ಮುಂದುವರೆದವು.
ಮೊದಲ ಬ್ಯಾಟಿಂಗ್ ಮಾಡಿದ ಪೊಲಿಸ್ ತಂಡ ೧೦೬ ರನ್ ಗಳಿಸಿದೆ. ನಂತರ ಪ್ರೆಸ್ ಎಲವೆನ್ ತಂಡ ೧೧ ಗಂಟೆ ಸುಮಾರಿಗೆ ಬ್ಯಾಟಿಂಗ್ ಆರಂಭಿಸಿದೆ.