ಬೆಳಗಾವಿ-ಮಹಿಳೆಯರು ಪುರುಷರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಮಹಿಳೆಯರ ಕಾಟದಿಂದ ಪುರುಷರು ನೇಣಿಗೆ ಶರಣಾಗುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಪತ್ನಿ ಪೀಡಿತರಿಗೆ ನ್ಯಾಯ ದೊರಕಿಸಿಕೊಡಲು ಪುರುಷ ಆಯೋಗ ರಚಿಸುವ ಕೂಗು ಬೆಳಗಾವಿಯಲ್ಲಿ ಕೇಳಿ ಬಂದಿದೆ
ಇತ್ತೀಚಿಗೆ ಮಹಿಳರಿಗಾಗಿ ನೂರಾರು ಕಾನೂನುಗಳಿವೆ. ಪುರುಷರಿಂದ ತನಗೇನಾದ್ರೂ ತೊಂದರೆ ಆದ್ರೆ ಅವಳು ದೂರು ನೀಡಿ ತನಗಾದ ಅನ್ಯಾಯಕ್ಕೆ ನ್ಯಾಯ ಪಡೆಯಲು ಆಯೋಗ ಇದೆ.ಆದ್ರೆ ಮಹಿಳೆಯರಿಂದ ಪುರುಷರಿಗೆ ಆಗುವ ಅನ್ಯಾಯದ ವಿರುದ್ಧ ದೂರು ಕೊಡಲು ಯಾವುದೇ ಆಯೋಗವಿಲ್ಲ.ಹಾಗಾಗಿ ಪುರುಷರ ಹಿತರಕ್ಷಣೆಗೆ ಸರ್ಕಾರ ಪುರುಷ ಆಯೋಗ ರಚನೆ ಮಾಡಬೇಕೆಂದು ಬೆಳಗಾವಿಯಲ್ಲಿ ಇವತ್ತು ಕೆಲವರು ಪ್ರತಿಭಟನೆ ನಡೆಸಿದ್ರು.
ರಾಜ್ಯದ ಯಾವುದೇ ಮೂಲೆಯಲ್ಲಿ ಮಹಿಳೆಯೊಬ್ಬಳಿಗೆ ಅನ್ಯಾಯ, ದಬ್ಬಾಳಿಕೆ ನಡೆದ್ರೆ ಇಡೀ ಸಮಾಜವೇ ಅವಳ ಪರವಾಗಿ ನಿಂತು ಹೋರಾಟ ನಡೆಸುತ್ತದೆ. ಅದರಲ್ಲೂ ಮಹಿಳಾ ಸಂಘಟನೆಗಳು, ಮಹಿಳಾ ಆಯೋಗ ಸೇರಿದಂತೆ ನಮ್ಮ ಕಾನೂನುಗಳು ಮಹಿಳೆಯರ ಪರವಾಗಿ ನಿಂತು ನ್ಯಾಯ ಒದಗಿಸುತ್ತವೆ. ಆದ್ರೆ ಪುರುಷರಿಗೆ ಆಗುವ ಅನ್ಯಾಯ, ದಬ್ಬಾಳಿಕೆಯ ವಿರುದ್ದ ಯಾರೊಬ್ಬರೂ ದ್ವನಿ ಎತ್ತುವುದಿಲ್ಲ.ಇದರ ಪರಿಣಾಮವೇ ದೇಶದಲ್ಲಿ ಪ್ರತಿ 8ನಿಮಿಷ 20ಸೆಕೆಂಡ್ ಗೆ ಒಬ್ಬ ಪುರುಷ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾನೆ ಎನ್ನುವುದು ಸಮೀಕ್ಷೆಯೊಂದರಿಂದ ಗೊತ್ತಾಗಿದೆ. ಇದಕ್ಕಾಗಿಯೇ ಇದೀಗ ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಪುರುಷರ ಪರವಾಗಿ ದ್ವನಿ ಎತ್ತುವ ಕೆಲಸ ನಡೆದಿದೆ. ಮಹಿಳಾ ಆಯೋಗದಂತೆ ದೇಶದಲ್ಲಿ ಪುರುಷ ಆಯೋಗ ರಚನೆಯಾಗಬೇಕೆಂದು ಒತ್ತಾಯಿಸಿ ಮಹಿಳೆಯರಿಂದ ನೊಂದ ಪುರುಷರು ಆಗಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗೆ ಇವತ್ತೂ ಸಹ ಮಹಿಳೆಯರಿಂದ ಅನ್ಯಾಯಕ್ಕೊಳಗಾದ ಕೆಲ ಪುರುಷರು, ತಮ್ಮ ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನಾ ಧರಣಿ ನಡೆಸಿದ್ರು. ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ರು.ಮಹಿಳೆಯರಿಗೆ ಸಿಗುವಂತೆ ಪುರುಷರಿಗೂ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ರು.
ತೋಷಕುಮಾರ.ಪುರುಷ ಪರ ಹೋರಾಟಗಾರ. ವಾಯ್ಸ್ :2 ಪುರುಷರ ಪರವಾಗಿ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸದ್ಧಿಲ್ಲದೇ ಹೋರಾಟ ನಡೆಯುತ್ತಿದೆ. 1) ಮಹಿಳಾ ಸಾಂತ್ವಾನದ ಕೇಂದ್ರದ ಮಾದರಿಯಲ್ಲಿಯೇ ಪುರುಷ ಸಾಂತ್ವಾನ ಕೇಂದ್ರಗಳನ್ನ ದೇಶದೆಲ್ಲೆಡೆ ಸ್ಥಾಪನೆ ಮಾಡಬೇಕು. 2)ಲಿಂಗಾಧಾರಿತ ಕಾನೂನುಗಳನ್ನ ಲಿಂಗತಟಸ್ಥಗೊಳಿಸಬೇಕು. 3)ದೇಶದಲ್ಲಿ ಕೂಡಲೇ ಜಾರಿಗೆ ಬರುವಂತೆ ರಾಷ್ಟ್ರೀಯ ಪುರುಷರ ಆಯೋಗ ರಚನೆ ಮಾಡಬೇಕು. 4)ಪೋಷಕರಿಂದ ಬೇರ್ಪಟ್ಟ ಮಕ್ಕಳ ಮೇಲೆ ತಂದೆ ತಾಯಿಗೆ ಇಬ್ಬರಿಗೂ ಸಮಾನ ಹಕ್ಕು ಒದಗಿಸಬೇಕು. 5)ಈಗಿರುವ ಕೌಟುಂಬಿಕ ಕಾನೂನು ಮರು ಪರಿಶೀಲನೆ ನಡೆಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಸದ್ಯ ಇವರ ಹೋರಾಟಕ್ಕೆ ಹೋದ ಕಡೆಗಳಲೆಲ್ಲಾ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇವರ ಹೋರಾಟ ಸರಿಯಾಗಿದೆ ಅಂತಾ ಜನರು ಇವರ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಬೈಟ್ : ಪರಶಿವಯ್ಯ. ಹೋರಾಟಕ್ಕೆ ಬೆಂಬಲ ನೀಡಿದವರು. ವಾಯ್ಸ್ :3 ಒಟ್ನಲ್ಲಿ ಮಹಿಳೆಯರಿಂದ ಅನ್ಯಾಯಕ್ಕೊಳಗಾದ ಪುರುಷರು ಒಂದಡೆ ಸೇರಿ ಹೋರಾಟ ರೂಪಿಸುತ್ತಿದ್ದಾರೆ. ದಿನವೂ ಇವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವರ ಸಂಖ್ಯೆ ಜಾಸ್ತಿಯಾದ್ರೆ ಆಶ್ಚರ್ಯಪಡಬೇಕಾಗಿಲ್ಲ