Breaking News

ಪ್ಯಾಸ್ ಫೌಂಡೇಶನ್..ಸಬ್ ಕೀ ಪ್ಯಾಸ್ ಭುಝಾಯೇ ರೇ…..!!!

 

ಬೆಳಗಾವಿ – ಭೂಮಿ ಮೇಲೆ ವಾಸ ಮಾಡುವ ಸಕಲ ಜೀವ ಸಂಕುಲಕ್ಕೆ ನೀರು ಬೇಕು ಬೇಸಿಗೆ ದಿನಗಳಲ್ಲಿ ಹಕ್ಕಿ ಗಳು ಕುಡಿಯುವ ನೀರಿಗಾಗಿ ಪರದಾಡುವದು ನಿಲ್ಲಬೇಕು ಹಕ್ಕಿಗಳಿಗೂ ನೀರು ಸಿಗಬೇಕು ಅದಕ್ಕಾಗಿ ಮಾನವ ಕೈಲಾದಮಟ್ಟಿಗೆ ಪ್ರಯತ್ನ ಮಾಡಬೇಕು ಪ್ಲಾಸ್ಟಿಕ್ ನಲ್ಲಿ ತಯಾರಿಸಿದ ನೀರಿನ ತೊಟ್ಟಿಗಳನ್ನು ತಯಾರಿಸಿ ಅವುಗಳನ್ನು ಅಲ್ಲಲ್ಲಿ ತೂಗು ಹಾಕುವ ವಿಶಿಷ್ಟ ಮತ್ತು ವಿಭಿನ್ನವಾದ ಅಭಿಯಾನವನ್ನು ಬೆಳಗಾವಿಯಲ್ಲಿ ಪ್ಯಾಸ್ ಫೌಂಡೇಶನ್ ಆರಂಭಿಸಿದೆ
:ಬೇಸಿಗೆ ಬಂತು ಅಂದ್ರೆ ಸಾಕು ಹನಿ ಹನಿ ನೀರಿಗೂ ಪರದಾಟ ಶುರುವಾಗುತ್ತೆ.ಮನುಷ್ಯರು ಹೇಗೋ ತಮ್ಮ ದಾಹ ತಣಿಸಿಕೊಂಡು ಬದುಕಬಹುದು.ಆದರೆ ಪಕ್ಷಿಗಳು ಮಾತ್ರ ನೀರಿಲ್ಲದೇ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಸಾವಿಗೀಡಾಗುತ್ತಲೇ ಇವೆ.ಇದನ್ನ ಮನಗಂಡ ಬೆಳಗಾವಿ ಪ್ಯಾಸ್ ಪೌಂಡೇಶನ್ ಪ್ರಸಕ್ತ ವರ್ಷದಿಂದ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ವಿನೂತನ, ಜನಜಾಗೃತಿ ಹಮ್ಮಿಕೊಂಡಿದೆ.ಇವತ್ತು ಮೇಡ್ ಕ್ರಿಯೇಟಿವ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕುಡಿಯುವ ನೀರಿನ ತೊಟ್ಟಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.ನಗರದ ವಿವಿಧ ಶಾಲೆಗಳ ಶಾಲಾ ವಿದ್ಯಾರ್ಥಿಗಳನ್ನ ಹನುಮಾನನಗರಕ್ಕೆ ಆಹ್ವಾನಿಸಿ ಅವರಿಂದ ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲೇಟ್ ಗಳಿಂದ ನೀರಿನ ತೊಟ್ಟಿ ತಯಾರಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು.ಹೀಗೆ ತಯಾರಿಸಲಾದ ವಿವಿಧ ಬಗೆಯ ೪೦೦ಕ್ಕೂ ಅಧಿಕ ನೀರಿನ ತೊಟ್ಟಿಗಳನ್ನ ಉಚಿತವಾಗಿ ವಿತರಣೆ ಮಾಡಲಾಯಿತು.ತೊಟ್ಟಿ ಕೊಂಡೊಯ್ಯವವರು ತಮ್ಮ ಮನೆಯ ಮಹಡಿ ಮೇಲೆ, ಮನೆಯ ಮುಂದಿನ ಗಿಡಗಳಲ್ಲಿ ನೇತು ಹಾಕಿ ಪಕ್ಷಿಗಳಿಗೆ ನೀರು ಒದಗಿಸುವಂತೆ ಮನವರಿಕೆ ಮಾಡಲಾಯಿತು.ನೀರು ಹಾಗೂ ತಂಪು ಪಾನೀಯ ಕುಡಿದ ನಂತರ ವ್ಯರ್ಥವಾಗಿ ಬೀಸಾಕುವ ಪ್ಲಾಸ್ಟಿಕ್ ಬಾಟಲಿಗಳನ್ನ ತೆಗೆದುಕೊಂಡು ತೊಟ್ಟಿ ತಯಾರಿಕೆ ಗೆ ಬಳಸಲಾಗಿದೆ.ಇದರಿಂದ ಪರಿಸರ ರಕ್ಷಣೆ ಜೊತೆಗೆ ಪಕ್ಷಿಗಳ ದಾಹ ತಣಿಸಲು ಪ್ಲ್ಯಾನ್ ರೂಪಿಸಲಾಗಿದೆ ಅಂತಾ ಪ್ಯಾಸ್ ಪೌಂಡೇಶನ್ ಸದಸ್ಯರು ತಿಳಿಸಿದ್ದಾರೆ.ಕಳೆದ ಮೂರು‌ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳ ಜೀರ್ಣೋದ್ಧಾರ ಮಾಡುವ ಮೂಲಕ ಕಾಯಕಲ್ಪ ನೀಡಿ, ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಪ್ಯಾಸ್ ಪೌಂಡೇಶನ್ ಇದೀಗ ಪಕ್ಷಿಗಳ ದಾಹ ತಣಿಸಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *