ಬೆಳಗಾವಿ- ಬೆಳಗಾವಿಯ ಹೆಮ್ಮೆಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಗಣ್ಯರು ಬಾರದ ಕಾರಣ ಗಣ್ಯರ ಅನುಪಸ್ಥಿತಿಯಲ್ಲೇ ಕುಲಪತಿ ಹೊಸಮನಿ ಅವರೇ ಘಟಿಕೋತ್ಸವವನ್ನು ನೆರವೇರಿಸಿದರು
ಘಟಿಕೋತ್ಸವಕ್ಕೆ ಕುಲಾದಿಪತಿ ವಜುಭಾಯಿ ವಾಲಾ.ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಭಾಗವಹಿಸಲಿಲ್ಲ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಲಿದ್ದ ಮುಖ್ಯ ಅತಿಥಿಗಳು ಬಾರದ ಕಾರಣ ಚನ್ನಮ್ಮ ವಿವಿ ಕುಲಪತಿ ಹೊಸಮನಿ ಅವರೇ ಎಲ್ಲ ಪಾತ್ರಗಳನ್ನು ನಿಭಾಯಿಸಬೇಕಾದ ಪ್ರಸಂಗ ಎದುರಾಯಿತು
ಆರ್ ಸಿ ಯು ವಿಧ್ಯಾರ್ಥಿ ಶೈಜಲ್ ಫಸಾರಿ ಬಿಕಾಂ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿ ಎಂ ಬಿ ಎ ಮಾಡುವ ಕನಸು ಹೊತ್ತಿದ್ದಾಳೆ
ಕಾಲೇಜಿಗೆ ರಜೆ ಇದ್ದಾಗ ದಿನನಿತ್ಯ ಬೆಳಿಗ್ಗೆ ಕಬ್ಬು ಕಟಾವ್ ಮಾಡಿ ಶ್ರಮಪಟ್ಟು ಓದುವ ಜೊತೆಗೆ ಬದುಕಿನ ಬಂಡಿ ಎಳೆದು ಸ್ವಂತ ಮನೆ ಮತ್ತು ಹೊಲ ಇಲ್ಲದಿದ್ದರೂ ಬೇರೆಯವರ ಹೊಲದಲ್ಲಿ ಬೆವರು ಸುರಿಸಿ ಓದಿದ ಸದಾಶಿವ ಗಾಣಿಗೇರ ಎಂ ಎ ವಿಭಾಗದಲ್ಲಿ ಎರಡು ಚಿನ್ನದ ಪದಕ ಗಳಿಸಿ ಎಲ್ಲರ ಗಮನ ಸೆಳೆದ
ಪಿ ಎಚ್ ಡಿ ಮಾಡಿ ಒಳ್ಳೆಯ ಉದ್ಯೋಗ ಮಾಡುವ ಮಹಾದಾಸೆ ಇದೆ ನಮ್ಮದು ಕೃಷಿ ಕೂಲಿ ಮಾಡುವ ಕುಟುಂಬ ಬಿಡುವು ಸಿಕ್ಕಾಗ ನಾನೂ ಕೃಷಿ ಕೂಲಿ ಮಾಡಿದೆ ನನ್ನ ಶಿಕ್ಷಣದ ಖರ್ಚನ್ನು ಜೊತೆಗೆ ಮನೆಯ ಖರ್ಚನ್ನು ಇದರಲ್ಲಿಯೇ ನಿಭಾಯಿಸಿದೆ ಶ್ರಮದ ಜೊತೆಗೆ ಗುರಿ ಮುಟ್ಟುವ ಛಲ ಇದ್ದರೆ ತಮಗೆ ಬೇಕಾದ್ದನ್ನು ಸಾಧಿಸಬಹುದು ಎಂದ ಸದಾಶಿವ ಗಾಣಿಗೇರ