ಸಾಮಾಜೀಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರೆದಿರುವ ರಡ್ಡಿ ಸಮಾಜಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಚಿವ ಸಂಪುಟದಲ್ಲಿ ರಡ್ಡಿ ಜನಪ್ರತಿನಿಧಿಗಳ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಜಿಲ್ಲಾ ರಡ್ಡಿ ಸಮಾಜ ಸಂಘದ ಅಧ್ಯಕ್ಷ ರಾಮಣ್ಣಾ ಮುಳ್ಳೂರ ಆಗ್ರಹಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿರುವ ಹಿಂದಿನ ಎಲ್ಲ ಸರ್ಕಾರಗಳು ರಡ್ಡಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಿ ಗೌರವಿಸಿದ್ದರು. ಆದರೆ, ಇದೀಗ ಬಿಜೆಪಿ ಸರ್ಕಾರದಲ್ಲಿ ರಡ್ಡಿ ಸಮಾಜ ಸಚಿವ ಸ್ಥಾನದಿಂದ ವಂಚಿತವಾಗಿ ಎಂದು ಬೇಸರ ವ್ಯಕ್ತಪಡಿಸಿದರು.
ರಡ್ಡಿ ಸಮಾಜ ಮೊದಲಿನಿಂದಲೂ ಸಚಿವ ಸ್ಥಾನಕ್ಕೆ ಅರ್ಹವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ರಡ್ಡಿ ಸಮಾಜ ಮುಂಚೂಣಿಯಲ್ಲಿದೆ. ಕೆ.ಸಿ ರೆಡ್ಡಿ ಸೇರಿದಂತೆ ಅನೇಕ ಯೋಗದಾನ ಅಧಿಕವಾಗಿದೆ. ಹಿಂದಿನ ಜನತಾದಳ, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರಗಳಲ್ಲಿ ರಡ್ಡಿ ಸಮಾಜದ ಜನಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡಲಾಗಿದೆ. ಬಿಜೆಪಿಯಲ್ಲಿ ಯಾದಗೀರಯ ವೆಂಕಟರೆಡ್ಡಿ ,ದೇವರ ಹಿಪ್ಪರಗಿ ಸೊಮನಗೌಡ ಪಾಟೀಲ, ಮುದ್ದೇಬಿಹಾಳ ಎ.ಎಸ್.ಪಾಟೀಲ್ ನಡಹಳ್ಳಿ , ಬಳ್ಳಾರಿ ಸೊಮಶೇಖರರೆಡ್ಡಿ ,ಹರಪನಹಳ್ಳಿ ಕರುಣಾಕರರೆಡ್ಡಿ ,ಬೊಮ್ಮನಳ್ಳಿ ಸತೀಶ್ ರೆಡ್ಡಿ,ಹುನಗುಂದದ ದೌಡ್ಡನಗೌಡ ಜಿ ಪಾಟೀಲ್ ಸೇರಿದಂತೆ 9 ಜನ ರಡ್ಡಿ ಸಮಾಜದ ಜನಪ್ರತಿನಿಧಿಗಳಿದ್ದಾರೆ. ಇದರಲ್ಲಿ ಕನಿಷ್ಠ 3 ಜನಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ರಾಜ್ಯ ಮಟ್ಟದಲ್ಲಿ ರಡ್ಡಿ ಸಮಾಜ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸೇರಿದಂತೆ ಮುಖಂಡರಿಗೆ ಮನವಿ ಸಲ್ಲಿಸಿ ಒತ್ತಡ ಹಾಕಲಾಗಿದೆ. ಮುಂದಿನ 2 ದಿನಗಳಲ್ಲಿ ಜಿಲ್ಲಾ ರಡ್ಡಿ ಸಂಘದ ವತಿಯಿಂದ ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಒಂದು ಸಮಾಜದ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ 9 ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಜನಸಂಖ್ಯೆ ಹೊಂದಿರುವ ಮತ್ತು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಡ್ಡಿ ಸಮಾಜಕ್ಕೆ ಬಿಜೆಪಿ ಸ್ಥಾನ ನೀಡಿ ಗೌರವಿಸಬೇಕು. ಹಿಂದಿನ ಸರ್ಕಾರಗಳು ಅನುಸರಿಸಿದ ಮಾದರಿಯಲ್ಲಿ ಬಿಜೆಪಿ ಸರ್ಕಾರ ಅನುರಿಸಬೇಕು ಎಂದು ವಿನಂತಿಸಿದರು.
ಸಂಘದ ಉಪಾಧ್ಯಕ್ಷ ಬಿ.ಎನ್.ಬಾವಲತ್ತಿ, ಬಿ.ಎನ್.ನಾಡಗೌಡ,ನಾರಾಯಣ ಕೆಂಚರೆಡ್ಡಿ, ಆರ್.ಎಲ್ ಅರಕೇರಿ,ಸನೀಲ್ ವಂಟಗೋಡಿ,ಶಂಕರ್ ಅರಕೇರಿ. ಆರ್.ಎಲ್ ಕಟಗಲ್,ಮಂಜುನಾಥ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.
