ಬೆಳಗಾವಿ- ನಗರದ ಜಿಲ್ಲಾ ಕ್ರೀಂಡಾಗಣದಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಬೃಹತ್ ಕಾರ್ಯಕರ್ತರ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು. ೨.೪೫ ಕ್ಕೆ ವೇದಿಕೆಯತ್ತ ಆಗಮಿಸಿದ ಯುವರಾಜ ನೆರದ ಜನರತ್ತ ಕೈಬಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮಾತನಾಡಿ, ದೇಶದ ಬಡ ಜನರ ಮೇಲೆ ಮೋದಿಯಿಂದ ಆಕ್ರಮಣ. ದೇಶದ ಆರ್ಥಿಕ ವ್ಯವಸ್ಥೆ ಮೇಲೆ ದಾಳಿ ನಡೆಸಿದ್ದಾರೆ. ನೋಟು ಅಮಾನತು ಮಾಡಿರುವುದು ರಾಷ್ಟ್ರೀಯ ದುರಂತ. ಎರಡೂ ವರ್ಷದಿಂದ ಮೋದಿ ಸರ್ಕಾರ ಬಡವರ ಮೇಲೆ ಆಕ್ರಮಣ ಮಾಡುತ್ತಿದೆ. ಯುಪಿಎ ಸರ್ಕಾರದ ಕೃಷಿ ಜಮೀನು ರಕ್ಷಣೆ ಕಾಯಿದೆ ಮುಗಿಸುವ ಹುನ್ನಾರ ಮೋದಿಯಿಂದ ನಡೆಯುತ್ತಿದೆ. ಬಡವರ ಆಶಾಕಿರಣವಾಗಿದ್ದ ನರೇಗಾ ಯೋಜನೆ ರದ್ದು ಗೊಳಿಸುವ ಹುನ್ನಾರ ಮೋದಿಯಿಂದ ನಡೆಯುತ್ತಿದೆ.
ಎರಡೂವರೆ ವರ್ಷದಲ್ಲಿ ದೇಶದಲ್ಲಿ ಬಿಜೆಪಿ ಸದಸ್ಯರಿಂದ ೬೦ರಷ್ಟು ಹಣ ಸಂಗ್ರಹ. ನೋಟು ರದ್ದು ಭ್ರಷ್ಟಾಚಾರ ವಿರುದ್ಧದ ಕ್ರಮವಲ್ಲ, ಬಡವರ ವಿರುದ್ಧದಕ್ರಮ. ಕಪ್ಪು ಹಣ ಯಾರ ಬಳಿ ಇದೆ, ಎಲ್ಲ ಹಣವೂ ಕಪ್ಪುಹಣವಲ್ಲ. ಯಾವುದೇ ರೈತನ ಮನೆಯಲ್ಲಿ ಕಪ್ಪುಹಣ ಸಿಗೊಲ್ಲ. ಶ್ರೀಮಂತರ ಮನೆಯಲ್ಲಿ ಮಾತ್ರ ಕಪ್ಪು ಹಣವಿದೆ ನಗದು ರೂಪದಲ್ಲಿ ಇಲ್ಲ ಎಂದು ಕೇಂದ್ರದ ವಿರುದ್ಧ ಗುಡುಗಿದರು.
ದೇಶದ ಕಪ್ಪು ಹಣ ವಿದೇಶದಲ್ಲಿದೆ ಎಂದು ದೇಶದ ಜನರಿಗೆಹೇಳಿದ್ದ ಮೋದಿ ಅದನ್ನು ಮರಳಿ ತರಲು ಹಿಂದೇಟು ಹಾಕುತ್ತಿದ್ದಾರೆ ಏಕೆ. ಲಲಿತ ಮೋದಿ, ವಿಜಯ ಮಲ್ಯ ದೇಶಕ್ಕೆ ಏಕೆ ಮರಳುತ್ತಿಲ್ಲ. ಮಲ್ಯ ದೇಶದ ಕಳ್ಳ. ಅವನ ಸಾಲ ಮನ್ನಾ ಮಾಡಿದ್ದು ಏಕೆ. ಕಪ್ಪುಹಣ ಸ್ವಿಸ್ ಬ್ಯಾಂಕ್ ನಲ್ಲಿದ್ದರರೂ ತರುತ್ತಿಲ್ಲವೇಕೆ. ಮೋದಿ ಬೆಳಗಾವಿಗೆ ಬಂದಾಗ ಕಳ್ಳರು ಎಟಿಎಂ ಎದುರು ನಿಂತಿದ್ದಾರೆ ಎಂದಿದ್ದರು.ಮೋದಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಪ್ಪು ಹಣದ ವಿರುದ್ದ ನಿಮ್ಮ ದಾಳಿಯಲ್ಲ, ದೇಶದ ಬಡವರ ವಿರುದ್ಧ ದಾಳಿ ನಡೆಸಿರುವುದು ಖಂಡನೀಯ ಎಂದು ಗುಡುಗಿದರು.
ನೋಟು ರದ್ಧತಿಯಿಂದ ಬಡವರು, ರೈತರು ಕಷ್ಟ ಎದುರಿಸುತ್ತಿದ್ದಾರೆ. ಮೋದಿ ಬಡವರ ಹಣ ಕಸಿದುಕೊಂಡಿದ್ದಾರೆ. ಮಕ್ಕಳ ಮದುವೆಗೆ, ಹಿರಿಯರ ಆರೋಗ್ಯಕ್ಕೆ ಇಟ್ಟಹಣ ನೋಟು ರದ್ಧತಿ ಮೂಲಕ ಕಸಿದುಕೊಂಡಿರಿ. ಮೋದಿ ಪ್ರಧಾನಿ ಬಳಿಕ ದೇಶದಲ್ಲಿನಿರುದ್ಯೋಗ. ಕರ್ನಾಟಕದ ರೈತರು ಕಷ್ಟದಲ್ಲಿದ್ದು, ಇವರ ಕಷ್ಟ ಕೇಳುವ ಸಮಯ ಮೋದಿ ಬಳಿ ಇಲ್ಲ. ಕಾಂಗ್ರೆಸ್ ನಿಯೋಗಕ್ಕೆ ಸಮಯ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಮೋದಿ ಅವರದು ಸೂಟು, ಬೂಟಿನ ಸರ್ಕಾರ. ಬಡ, ರೈತ, ಕಾರ್ಮಿಕ ವಿರೋಧಿ ಸರ್ಕಾರ. ನೋಟು ರದ್ಧತಿಯ ೫೦ ದಿನದ ಬಳಿಕ ಯಾವುದೇ ಬದಲಾವಣೆ ಆಗದು. ಶ್ರೀಮಂತರ ಸಾಲಮನ್ನಾ ಮಾಡುವ ದುರುದ್ದೇಶದಿಂದ ಬಡವರ ಹಣ ಬ್ಯಾಂಕಿಗೆ ಸೇರಿಸುವ ಹುನ್ನಾರ ಮೋದಿಯಿಂದ ನಡೆಯುತ್ತಿದೆ.. ಬಡವರ ಪ್ರಶ್ನೆಗೆ ಮೋದಿ ಉತ್ತರಿಸಲೇ ಬೇಕು. ಪ್ರತಿಕ್ರಿಯಿಸುವ ವರೆಗೆ ಕಾಂಗ್ರೆಸ್ ಬಿಡುವುದಿಲ್ಲ. ಮೋದಿ ನಿರ್ಧಾರದ ಬಗ್ಗೆ ಬಿಜೆಪಿ ಶಾಸಕರಿಗೆ, ಸಂಸದರಿಗೆ ಮೊದಲೇ ಗೊತ್ತಿತ್ತು. ನವೆಂಬರ್ ಆರಂಭದಲ್ಲಿ ಆರು ಲಕ್ಷ ಕೋಟಿ ರೂ. ಬ್ಯಾಂಕ್ಗೆ ಪಾವತಿಯಾಗಿತ್ತು. ಜಮೀನು, ಚಿನ್ನ ಖರೀದಿಯಾಗಿತ್ತು ಎಂದು ದೂರಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನೋಟು ರದ್ಧತಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೋದಿ ಅವರು ಕಪ್ಪು ಕುಳಗಳನ್ನು ರಕ್ಷಣೆಗೆ ಈ ನಿರ್ಧಾರ ಕೈಗೊಂಡಿದ್ದಾರೆ. ಮಧ್ಯಪ್ರದೇಶ, ಗುಜರಾತ ದಲ್ಲಿ ಚಿನ್ನ ಖರೀದಿ, ನಿವೇಶನ ಖರೀದಿ ಬಳಿಕ ನೋಟು ರದ್ದುಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಮುಖಂಡರ ಕ್ರಮ ಖಂಡನೀಯ. ಮೋದಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಮೋದಿ ಜನ ವಿರೋಧಿ ನೀತಿ, ಕೇಂದ್ರದ ಲೋಪಗಳ ಬಗ್ಗೆ ಹಳ್ಳಿಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮೋದಿ ಪ್ರಧಾನಿ ಆದ ಬಳಿಕ ದೇಶದ ರಾಜಕಾರಣ, ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಭರವಸೆ ದೇಶದ ಜನರಿಗೆ ನೀಡಿದ್ದರು. ದೇಶದ ಜನ ಬ್ರಹ್ಮ ನಿರಶನಗೊಂಡಿದ್ದಾರೆ. ಎರಡು ವರ್ಷ ಕಳೆದರೂ ಮೋದಿ ಸಂಪೂರ್ಣ ವಚನ ಭ್ರಷ್ಟ ರಾಗಿದ್ದಾರೆ. ಸ್ವಾಭಿಮಾನ ಜೀವನಕ್ಕೆ ನೆರವು, ಕಪ್ಪು ಹಣ ತರುವ ಜತೆಗೆ ಭ್ರಷ್ಟಾಚಾರ ಮುಕ್ತ ಭರವಸೆ ಮೋದಿ ನೀಡಿದ್ದರು. ಎರಡು ವರ್ಷ ಕಳೆದರೂ ನೀಡಿದ ಭರವಸೆ ಈಡೇರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದುದೂರಿದರು.
ಇಂದಿರಾ ಗಾಂಧಿ ಬ್ಯಾಂಕ್ ಗಳ ರಾಷ್ಟ್ರೀಕೃತ ಮಾಡುವ ಮೂಲಕ ಬಡವರು, ರೈತರಿಗೆ ಅನುಕೂಲ ಮಾಡಿಕೊಟ್ಟರು. ಆದರೆ ಮೋದಿ ಏನೂ ಮಾಡಲಿಲ್ಲ. ಶ್ರೀಮಂತರು ಯಾರೂ ಎಟಿಎಂ ಎದುರುನಿಂತಿಲ್ಲ. ಕೂಲಿ ಕಾರ್ಮಿಕರು, ಬಡವರು ಎಟಿಎಂ ಎದುರು ನಿಲ್ಲುವಂತಾಗಿದೆ. ಸಿದ್ಧತೆ ಇಲ್ಲದೇ ನೋಟು ರದ್ಧತಿ ಮಾಡಿರುವುವದರಿಂದ ಜನರು ಕಷ್ಟ ಪಡುವಂತಾಗಿದೆ. ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ಬರುವುದಾಗಿ ಸಿಎಂ ಭವಿಷ್ಯ ನುಡಿದರು.
ಮುಂಗಾರು, ಹಿಂಗಾರು ಕೈಕೊಟ್ಟಿದ್ದು, ೧೩೬ ತಾಲೂಕಿನಲ್ಲಿ ಬರ ಇದೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಬರ ಚರ್ಚೆಗೆ ಭೇಟಿ ಮಾಡಲು ಅವಕಾಶ ಕೊಡಿ. ತಾವು ಪ್ರಜಾತಂತ್ರ ವ್ಯವಸ್ಥೆ ವಿರುದ್ಧ ಆಡಳಿತ ನಡೆಸುತ್ತಿರುವುದು ಖಂಡನೀಯ ಎಂದು ವಾಗ್ದಾಲಿ ನಡೆಸಿದರು.ರಾಜ್ಯ ಬಿಜೆಪಿ ಮುಖಂಡರು ಸಾಲಮನ್ನಾ ಮಾಡಲು ಆಗ್ರಹಿಸುತ್ತಿದ್ದಾರೆ. ಪ್ರಧಾನಿ ರಾಷ್ಟ್ರೀಕೃತ ಬ್ಯಾಂಕ್‌ನ ಸಾಲ ಮನ್ನಾ ಮಾಡಿದ್ರೆ, ರಾಜ್ಯ ಸರ್ಕಾರ ಕೂಡ ಸಹಕಾರದ ಸಾಲಮನ್ನಾ ಮಾಡಲು ಸಿದ್ಧವಿದೆ ಎಂದು ಭರವಸೆ ನೀಡಿದರು. ಕಳಸಾ ಜಾರಿಗೆ ಹಿಂದಿನ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿದ್ದರು. ಆದರೆ ಮೋದಿ ಮಾತ್ರ ನ್ಯಾಯಾಧೀಕರಣ ನೆಪ ಹೇಳುತ್ತಿರುವುದು ರೈತ ವಿರುದ್ಧ ನೀತಿ ದೂರಿದರು.
೨೦೧೮ರ ವಿಧಾನಸಭೆ ಚುನಾವಣೆ ಬೆಳಗಾವಿಯಿಂದಲೇ ರಣಕಹಳೆ ಮೊಳಗಿಸಲಾಗುವುದು. ರಾಜ್ಯ ಬಿಜೆಪಿ ಹಾಗೂ ಕೇಂದ್ರದ ವಿರುದ್ಧ ಹೋರಾಟ ನಡೆಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಕನಿಷ್ಟ ೧೩ ಸ್ಥಾನ ಗೆಲ್ಲಿಸಿಕೊಡಬೇಕು ಎಂದು ಕೋರಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಶಾಂತಾರಾಮ ನಾಯಕ, ಕಾಂಗ್ರೆ ಉಸ್ತುವಾರಿ ದಿಗ್ವಿಜಯ ಸಿಂಗ್, ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ. ಶಿವಕುಮಾರ, ರಮೇಶ ಜಾರಕಿಹೋಳಿ, ಸಂಸದರಾದ ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮತ್ತಿತರರು ಹಾಜರಿದ್ದರು.