ಬೆಳಗಾವಿ- ನಾಲ್ಕು ವರ್ಷದಿಂದ ದೇಶದಲ್ಲಿ ಬಿಜೆಪಿ ಸರ್ಕಾರ ಇದೆ ಪ್ರಧಾನಿ ನರೇಂದ್ರ ಮೋದಿ ಅವರು ಬಗಲಲ್ಲಿ ಬ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಜೈಲುವಾಸ ಅನುಭವಿಸಿದ ನಾಲ್ಕು ಮಂತ್ರಿಗಳನ್ನು ಬದಿಯಲ್ಲಿ ಕೂರಿಸಿಕೊಂಡು ಬ್ರಷ್ಡಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ರಾಹುಲ್ ಗಾಂಧೀ ವ್ಯೆಂಗ್ಯವಾಡಿದ್ದಾರೆ
ಸವದತ್ತಿಯಲ್ಲಿ ಜನಾಶಿರ್ವಾದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಪ್ರದಾನಿ ನರೇಂದ್ರ ಮೋದಿ ದೇಶದಲ್ಲಿ ನೋಟ್ ಬಂಧೀ ಮಾಡಿ ದೇಶದ ಬಡವರನ್ನು ಬ್ಯಾಂಕಿನ ಎದರು ಸರದಿಯಲ್ಲಿ ನಿಲ್ಲಿಸಿದರು ಸರದಿಯಲ್ಲಿ ಒಬ್ಬರೂ ಸೂಟು ಬೂಟಿನವರು ನಿಲ್ಲಲಿಲ್ಲ ಸೂಟು ಬೂಟಿನವರು ಪ್ರಧಾನಿ ನರೇಂದ್ರ ಮೋದಿ ಅವರ ಕೃಪೆಯಿಂದ ಬ್ಯಾಂಕಿನ ಹಿಂದಿನ ಬಾಗಿಲಿನಿಂದ ತಮ್ಮ ಕಪ್ಪು ಹಣವನ್ನು ಲಿಗಲಾಯಿಸ್ ಮಾಡಿಕೊಂಡರು ಎಂದು ರಾಹುಲ್ ಗಾಂಧೀ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದರು
ಪ್ರಧಾನಿ ನರೇಂದ್ರ ಮೋದಿ ನೋಟ್ ಬಂಧೀ ಮಾಡಿ ಬಡವರ ಹಣವನ್ನು ಬ್ಯಾಂಕಿಗೆ ಜಮಾ ಮಾಡಿಸಿದರು ಬ್ಯಾಂಕಿನಲ್ಲಿ ಕೂಡಿಟ್ಟ 22 ಸಾವಿರ ಕೋಟಿ ಹಣವನ್ನು ನಿರವ ಮೋದಿ ಕೊಳ್ಳೆ ಹೊಡೆದು ದೇಶ ಬಿಟ್ಟು ಹೋದರು ಪ್ರಧಾನಿ ನರೇಂದ್ರ ಮೋದಿ ಚಕಾರವೆತ್ತುತ್ತಿಲ್ಲ ಎಂದು ರಾಹುಲ್ ಹೇಳಿದರು
ಪ್ರಧಾನಿ ನರೇಂದ್ರ ಮೋದಿ ರೆಫೈಲ್ ಯುದ್ಧವಿಮಾನ ಖರೀಧಿ ಕಾಂಟಾಕ್ಟ ಡೀಲ್ ರಾತ್ರೋ ರಾತ್ರಿ ಬದಲಾಯಿಸುವಾಗ ದೇಶದ ರಕ್ಷಣಾ ಮಂತ್ರಿಗೆ ಗೊತ್ತೇ ಇರಲಿಲ್ಲ ಡೀಲ್ ಚೇಂಜ್ ಆಗುವಾಗ ದೇಶದ ರಕ್ಷಣಾ ಮಂತ್ರಿಗಳು ಗೋವಾ ಮಾರ್ಕೆಟ್ ನಲ್ಲಿ ಮೀನು ಖರೀಧಿ ಮಾಡುತ್ತಿದ್ದರು ಎಂದು ರಾಹುಲ್ ಗಾಂಧೀ ಟೀಕಿಸಿದರು
ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಭರವಸೆ ಈಡೇರಿಸಲಿಲ್ಲ ಕಪ್ಪು ಹಣ ಬರಲಿಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿಲ್ಲ ಇದು ಬಸವನ ನಾಡು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಬೇಕೆಂದು ರಾಹುಲ್ ಗಾಂಧಿ ಮನವಿ ಮಾಡಿಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ