ಬೆಳಗಾವಿ- ಕುಖ್ಯಾತ ರೇಪಿಸ್ಟ ಉಮೇಶ ರೆಡ್ಡಿಗೆ ಜೀವದಾನ ನೀಡುವ ಎಲ್ಲ ಬಾಗಿಲುಗಳು ಬಹುಶ ಬಂದ್ ಆದಂತೆ ಕಾಣುತ್ತಿದೆ ಸುಪ್ರೀಂ ಕೋರ್ಟಿನಲ್ಲಿ ಉಮೇಶ ರೆಡ್ಡಿ ದಾಖಲಿಸಿದ ಮರು ಪರಶೀಲನಾ ಅರ್ಜಿ ತಿರಸ್ಕೃತಗೊಂಡಿದ್ದು ಆತ ಮತ್ತೆ ಸುಪ್ರೀಂ ಕೋರ್ಟಿನಲ್ಲಿ ಕ್ಯುರೇಟಿವ್ ಪಿಟಿಶನ್ ದಾಖಲಿಸಲು ನಿರ್ಧರಿಸಿದ್ದು ಈ ಪಿಟಿಶನ್ ತಿರಸ್ಕೃತಗೊಳ್ಳುವ ಸಾದ್ಯತೆ ಇದ್ದು ಉಮೇಶ ರೆಡ್ಡಿಗೆ ಗಲ್ಲು ಗ್ಯಾರಂಟಿಯಾದಂತಾಗಿದೆ
ಸೋಮವಾರ ಕ್ಯರೇಟಿವ್ ಪಿಟಿಶನ್ ದಾಖಲಾದರೆ ಅದು ಕೂಡಾ ತಿರಸ್ಕೃತಗೊಂಡು ಸೋಮವಾರ ಸಂಜೆಯೇ ಉಮೇಶ ರೆಡ್ಡಿಯ ಗಲ್ಲಿಗೆ ಡೇಟ್ ಫಿಕ್ಸ ಆಗುವ ಸಾಧ್ಯತೆಗಳೇ ಹೆಚ್ಚು
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಈಗ ಏನಿದ್ದರೂ ರೇಪಿಸ್ಟ ಉಮೇಶ ರೆಡ್ಡಿಯ ಗಲ್ಲಿನ ಗುಲ್ಲು ಎದ್ದಿದೆ ಇತನಿಗೆ ನೇಣುಗಂಬಕ್ಕೇರಿಸಲು ಹಿಂಡಲಗಾದಲ್ಲಿ ಸದ್ದಿಲ್ಲದೇ ತಯಾರಿ ನಡೆದಿದೆ ಮರಣ ದಂಡನೆ ನೀಡಲು ಇಲ್ಲಿಯ ಸಿಬ್ಬಂದಿಗೆ ನಿರಂರತವಾಗಿ ತರಬೇತಿ ನೀಡಲಾಗುತ್ತಿದೆ
೩೩ ವರ್ಷಗಳ ನಂತರ ಹಿಂಡಲಗಾ ಕಾರಾಗೃಹ ಮತ್ತೊಂದು ಗಲ್ಲು ಶಿಕ್ಷೆಗೆ ಸಾಕ್ಷಿಯಾಗಲಿದೆ
ಉಮೇಶ ರೆಡ್ಡಿ ಕೂಡಾ ಈಗ ಕ್ಯುರೇಟಿವ ಪಿಟಿಶನ್ ಮೇಲೆ ಅಪಾರ ನೀರೀಕ್ಷೆ ಇಟ್ಟುಕೊಂಡಿದ್ದಾನೆ ಇದು ರಿಜೇಕ್ಟ ಆದರೆ ಇತನಿಗೆ ಮರಣ ದಂಡನೆ ಗ್ಯಾರಂಟಿ
ಹಿಂಡಲಗಾ ಜೈಲಿನಲ್ಲಿ ಮರಣ ದಂಡನೆಗೆ ಗುರಿಯಾದವರು ಒಟ್ಟು ೨೭ ಜನ ಕೈದಿಗಳಿದ್ದಾರೆ ಇವರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ರೇಪಿಸ್ಟ ಉಮೇಶ ರೆಡ್ಡಿಯೂ ಇದ್ದಾನೆ ೨೦೦೬ ರಿಂದ ಉಮೇಶ ರೆಡ್ಡಿ ಹಿಂಡಲಗಾ ಕಾರಾಗೃಹದಲ್ಲಿಯೇ ಶಿಕ್ಷೆ ಅನುಭವಿಸುತ್ತಿದ್ದಾನೆ
ಇವನ ಸಮಂಧಿಕರು ಮತ್ತು ಇತನ ತಾಯಿ ಉಮೇಶ ರೆಡ್ಡಿಗೆ ಭೇಟಿಯಾಗಲು ಬೆಳಗಾವಿಗೆ ಬರುತ್ತಿದ್ದಾರೆ ಎಂದು ಜೈಲಿನ ಆಂತರಿಕ ಮೂಲಗಳು ದೃಡಪಡಿಸಿವೆ