ಬೆಳಗಾವಿಗೆ ರಾಜಮಾತಾ ಒಡೆಯರ್ ಭೇಟಿ

ಬೆಳಗಾವಿ
ಜನಕಲ್ಯಾಣಕ್ಕೆ ರಾಜಕಾರಣ ಅನಿವಾರ್ಯವಲ್ಲ. ರಾಜರಜಾರಣದಿಂದ ದೂರವುಳಿದು ಜನಕಲ್ಯಾಣ ಮಾಡಬಹುದು. ಚುನಾವಣೆಗೆ ಯಾವ ಕಾರಣಕ್ಕೂ ನಾನು ಸ್ಪರ್ಧಿಸುವುದಿಲ್ಲ. ಎಲ್ಲ ಪಕ್ಷದವರು ಹದಿನೈದು ವರ್ಷಗಳಿಂದ ಚುನಾವಣೆ ಸಮೀಪಿಸಿದಾಗ ಸಂಪರ್ಕಿಸುತ್ತಾರೆ. ಚುನಾವಣೆ ಸ್ಪರ್ದಿಸಲು ಇಚ್ಚೆ ಇದೆಯಾ ಎಂದು ಕೇಳುತ್ತಾರೆ. ಆದರೆ ನಾನು ಮಾತ್ರ ಚುನಾವಣೆಗೆ ಸ್ಪರ್ದಿಸುವುದಿಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ ಹೇಳಿದರು.
ಬುಧವಾರ ಕೆಎಲ್ಇ ಪಿಸಿಯೋಥೆರಪಿ ಕೇಂದ್ರವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತ‌ನಾಡಿದರು.
ಟಿಪ್ಪು ಸುಲ್ತಾನನಿಂದ ನಮ್ಮ ಕುಟುಂಬಕ್ಕೆ ತೊಂದರೆಯಾಗಿದೆ. ನಮ್ಮ ರಾಜ ವಂಶಸ್ಥರು ವೈಯಕ್ತಿವಾಗಿ ಟಿಪ್ಪು ಜಯಂತಿ ಸಮರ್ಥನೆ ಮಾಡುವುದಿಲ್ಲ. ಅದನ್ನು ವಿರೋಧಿಸುವುದು ಇಲ್ಲ, ಸ್ವಾಗತಿಸುವುದು ಇಲ್ಲ ಎಂದು

ಟಿಪ್ಪು ಸುಲ್ತಾನ್ ರಾಜನಿಂದ ನಮ್ಮ‌ ಕುಟುಂಬಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಯಾವ ಆಧಾರದ ಮೇಲೆ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ನಮ್ಮ ಪೂರ್ವಜರು ನಮ್ಮ ಕುಟುಂಬಕ್ಕೆ ತೊಂದರೆ ನೀಡಿದವರಿಂದ ದೂರ ಇರುವಂತೆ ಕಿವಿಮಾತು ಹೇಳಿದ್ದಾರೆ. ಆದ್ದರಿಂದ ಅದರ ಬಗ್ಗೆ ಹೆಚ್ಚಿಗೆ‌ ಮಾತನಾಡಲಾರೆ ಎಂದರು.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವಾಗಿ ಮಾತನಾಡಿದ ಅವರು, ಅವರ ನಂಬಿಕೆಗೆ ಬಿಟ್ಟಿದ್ದು ಮಹಿಳೆಯರಿಗೆ ಸ್ಥಾನ ಮಾನ ನೀಡಬೇಕು ಈ ನಿಟ್ಟಿನಲ್ಲಿ ಮಹಿಳೆಯರ ಪರವಾಗಿ ತೀರ್ಪು ಬಂದರೆ ಸ್ವಾಗತಿಸಬೇಕು ಎಂದರು.
ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿ.ಎಸ್.ಸಾಧುನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *