Breaking News

ರಮೇಶ ಜಾರಕಿಹೊಳಿ ನಮ್ಮ ಪಕ್ಷದವನಾ ?: ಶಾಸಕ ರಾಜು ಕಾಗೆ ಕಿಡಿ ….!!

ಚಿಕ್ಕೋಡಿ: ಅವನೇನು ನಮ್ಮ ಪಕ್ಷದವನಾ? ಅವನು ಬಿಜೆಪಿಯವನು.ಏನ್ ಬೇಕಾದರೂ ಹೇಳ್ತಾನೆ ?ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲೇ ‘ಕೈ’ ಶಾಸಕ ರಾಜು ಕಾಗೆ ವಾಗ್ದಾಳಿ ನಡೆಸಿದರು.

ಗುರುವಾರ ಕಾಗವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನ 30 ಶಾಸಕರು ಶಾಂಗ್ರಿಲಾ ಹೋಟೆಲ್‌ನಲ್ಲಿ ಸೇರೋರಿದ್ರು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೆಂಡಾಮಂಡಲರಾದರು.

ಅವನಿಗೆ ಕೆಲಸ ಇಲ್ಲ ಹೀಗಾಗಿ ಹೇಳುತ್ತಿರುತ್ತಾನೆ, ನಮಗೆ ಮಾಡಲು ಬಹಳಷ್ಟು ಕೆಲಸಗಳಿವೆ. ಸರ್ಕಾರದಲ್ಲಿ ಇದೀವಿ, ಅತೃಪ್ತಿ ಏನೂ ಇಲ್ಲ, ಆಪರೇಷನ್ ಕಮಲ ಏನಿಲ್ಲ. ಬಿಜೆಪಿಯ 15 ರಿಂದ 20 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ.‌ ಅವರನ್ನು ಕರೆದುಕೊಂಡು ಲೋಕಸಭಾ ಚುನಾವಣೆ ಮಾಡುತ್ತೇವೆ. ಯಾರು ಬರ್ತಾರೆ ಅಂತ ಈಗಲೆ ಹೇಳೋಕಾಗಲ್ಲ ಎಂದರು.

ನಮ್ಮಲ್ಲಿ ಯಾವುದೇ ಒಳಜಗಳ ಇಲ್ಲ. ಯಾವುದೂ ಲೋಪದೋಷಗಳು ಇಲ್ಲ. ನಾವು 135 ಜನ ಒಗ್ಗಟ್ಟಾಗಿದ್ದೀವಿ, ರಾಜ್ಯವನ್ನು ಪ್ರಗತಿಯತ್ತ ಒಯ್ಯುತ್ತೇವೆ. ಇನ್ನೂ 15 ರಿಂದ 20 ವರ್ಷ ನಾವೇ ಆಡಳಿತ ನಡೆಸುತ್ತೇವೆ ಏನೂ ತೊಂದರೆ ಇಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಸಮರ್ಥಿಸಿಕೊಂಡರು.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *