ಬೆಳಗಾವಿ- ಬೆಳಗಾವಿ ನಗರ ಜಿಲ್ಲಾ ಕಾಂಗ್ರೆಸ್ ಘಟಕವನ್ನು ಅನುರ್ಜಿತಗೊಳಿಸಿಲ್ಲ ನಗರ ಘಟಕ ಸ್ಥಾನ ಮುಂದುವರೆಯಲಿದ್ದು ಬೆಳಗಾವಿ ಗ್ರಾಮೀಣ ಘಟಕವನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್,ರಾಜು ಸೇಠ ಅವರ ಜೊತೆ ದೂರವಾಣಿ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ
ವೇಣುಗೋಪಾಲ ಮನಿಕ್ಕಮ್ ಠ್ಯಾಗೋರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ ಅವರು ಬೆಳಗಾವಿ ನಗರ ಜಿಲ್ಲಾಧ್ಯಕ್ಷ ರಾಜುಸೇಠ ಅವರ ಜೊತೆ ಮಾತನಾಡಿ ನಗರ ಜಿಲ್ಲಾ ಘಟಕ ಎಂದಿನಂತೆ ಕಾರ್ಯನಿರ್ವಣೆ ಮಾಡಲಿದ್ದು ಜಿಲ್ಲಾಧ್ಯಕ್ಷರಾಗಿ ತಾವೇ ಮುಂದುವರೆಯಿರಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದ್ದು ರಾಜು ಸೇಠ ಅವರ ಕಚೇರಿಯಲ್ಲಿ ಸಂತಸ ಮನೆ ಮಾಡಿದ್ದು ಅವರ ಅಭಿಮಾನಿಗಳು ಅಭಿನಂಧನೆ ಸಲ್ಲಿಸಲು ತಂಡೋಪ ತಂಡವಾಗಿ ಬರುತ್ತಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ