Breaking News

ರಾಕಸಕೊಪ್ಪ ಜಲಾಶಯ ಭರ್ತಿ, ಎರಡು ಗೇಟ್ ಓಪನ್ ನೀರು ಬಿಡುಗಡೆ

ಬೆಳಗಾವಿ – ಬಹುಶ ಬೆಳಗಾವಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಹು ಬೇಗ ಬೆಳಗಾವಿ ಮಹಾನಗರದ ಜಲದ ಮೂಲ ರಾಕಸಕೊಫ್ಪ ಜಲಾಶಯ ಭರ್ತಿಯಾಗಿದ್ದು ಇವತ್ತು ಎರಡು ಗೇಟ್ ಗಳನ್ನು ಓಪನ್ ಮಾಡಿ ನೀರು ಬಿಡುಗಡೆ ಮಾಡಲಾಗಿದೆ.

ರಾಕಸಕೊಪ್ಪ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನಲೆಯಲ್ಲಿ ಬೆಳಗಾವಿ ನಗರದ ಪಕ್ಕದಲ್ಲೇ ಹರಿಯುತ್ತಿರುವ ಮಾರ್ಕಂಡೇಯ ನದಿಯ ಒಳ ಹರಿವು ಹೆಚ್ಚಾಗಿದೆ.

ರಾಕಸಕೊಪ್ಪ ಜಲಾಶಯ ಪ್ರತಿವರ್ಷ ಜುಲೈ ತಿಂಗಳ ಅಂತ್ಯದಲ್ಲಿ ಇಲ್ಲವಾದ್ರೆ ಅಗಸ್ಟ ತಿಂಗಳಲ್ಲಿ ತುಂಬುತ್ತದೆ.ಆದ್ರೆ ಇದೇ ವರ್ಷ ಜುಲೈ ತಿಂಗಳ ಮೂರನೇಯ ವಾರದ ಹೊಸ್ತಿಲಲ್ಲೇ ಜಲಾಶಯ ತುಂಬಿಕೊಂಡಿದ್ದು ಬೆಳಗಾವಿ ಮಹಾನಗರದ ನಿವಾಸಿಗಳಿಗೆ ಇದೊಂದು ಗುಡ್ ನ್ಯುಸ್.

ರಾಕಸಕೊಪ್ಪ ಜಲಾಶಯದ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ವಿಪರೀತ ಮಳೆಯ ಪರಿಣಾಮ ಜಲಾಶಯ ಬಹುಬೇಗ ತುಂಬಿದೆ. ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಎರಡು ಗೇಟ್ ಗಳನ್ನು ಇಂದು ಓಪನ್ ಮಾಡಿ ಹೆಚ್ವುವರಿ ನೀರು ಬಿಡುಗಡೆ ಮಾಡಲಾಗುತ್ತಿದೆ.

ಬೆಳಗಾವಿಯ ರಾಕಸಕೊಪ್ಪ ಜಲಾಶಯದ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದು ಸರ್ ಎಂ ವಿಶ್ವೇಶರಯ್ಯ ಈ ಜಲಾಶಯವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅನುದಾನದಿಂದಲೇ ನಿರ್ಮಿಸಲಾಗಿದೆ. ಪಾಲಿಕೆ ಅನುದಾನದಲ್ಲಿ ಜಲಾಶಯ ನಿರ್ಮಿಸಿದ್ದು ದೇಶದಲ್ಲೇ ಮೊದಲು ಎಂಬುದು ಹೆಮ್ಮೆಯ ಸಂಗತಿಯಾಗಿದೆ.

In 2018 it had overflown on July 16In 2017 it had overflown in SeptemberIn 2016 it had overflown on August 7In 2015 it had overflown on August 4In 2014 it had overflown on July 30In 2013 it had overflown on July 22In 2012 the reservoir was full on August 6In 2011 the reservoir was full on July 18In 2010 the reservoir was full on 4 August

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *