ಬೆಳಗಾವಿ- ಬೆಳಗಾವಿ ನಗರದ ಮುಖ್ಯ ಜಲದ ಮೂಲವಾಗಿರುವ ರಾಕಸಕೊಪ್ಪ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜಲಾಶಯದ ಭರ್ತಿಗೆ ಕೇವಲ ಎಂಟು ಅಡಿ ಮಾತ್ರ ಬಾಕಿ ಉಳಿದಿದೆ
ಕಳೆದ ಒಂದು ವಾದದಿಂದ ರಾಕಸಕೊಪ್ಪ ಜಲಾಶಯದ ಪಾತ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ ಒಳಹರಿವು ಹೆಚ್ಚಾಗಿ ಪ್ರತಿ ದಿನ ಸರಾಸರಿ ಒಂದು ಅಡಿ ನೀರಿನ ಮಟ್ಟ ಹೆಚ್ಚಾಗುತ್ತಿ
ಇನ್ನೊಂದು ವಾರ ಇದೇ ರೀತಿ ಮಳೆ ಸುರಿದರೆ ವಾರದಲ್ಲಿ ಜಲಾಶಯ ಭರ್ತಿಯಾಗುತ್ತದೆ ಜಲಾಶಯ ಭರ್ತಿಯಾಗಲು ಮೂವತ್ತು ಅಡಿ ನೀರು ಬೇಕು ಈಗ ಸದ್ಯಕ್ಕೆ ಇಪ್ಪತ್ತೆರಡು ಅಡಿ ನೀರು ಜಲಾಶಯದಲ್ಲಿ ಭರ್ತಿಯಾಗಿದ್ದು ಎಂಟು ಅಡಿ ನೀರು ಹರಿದು ಬಂದಲ್ಲಿ ಜಲಾಶಯ ಭರ್ತಿಯಾಗಲಿದೆ
ಕಳೆದ ವರ್ಷವೂ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹರಿದು ಬಿಡಲಾಗಿತ್ತು ಜುಲೈ ತಿಂಗಳ ಅಂತ್ಯದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಜಲಾಶಯದ ಒಳ ಹರಿವು ಹೆಚ್ಚಾಗಿದೆ