Breaking News

ರಾಮಭಾವು ಪೋತದಾರ ಅಂತಿಮ ದರ್ಶನ ಪಡೆದ ಆಪ್ತ ಸ್ನೇಹಿತ

ಬೆಳಗಾವಿ— ಜನತಾ ಪರಿವಾರದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ರಾಮಭಾವು ಪೋತದಾರ್ ಇಂದು ವಿಧಿವಶರಾದರು.

ಈ ಹಿನ್ನೆಲೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅವರು ರಾಮಬಾವು ಅವರ ಅಂತಿ‌ ದರ್ಶನ ಪಡೆದು ಸಂತಾಪ ಸೂಚಿಸಿದ್ರು. ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಭಾಗ್ಯನಗರದಲ್ಲಿರುವ ರಾಮಭಾವು ಮನೆಗೆ ಭೇಟಿ ನೀಡಿ ರಾಮಭಾವು ಪೋತದಾರ್ ಅಂತಿಮ ದರ್ಶನ ಪಡೆದು ಭಾವುಕರಾಗಿ ಕಣ್ಣಿರಿಟ್ಟರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ೧೯೭೭ರಿಂದ ರಾಮಬಾವು ಅವರ ಪರಿಚಯ ಇದೆ ನಮ್ಮದು ಅವರು ಗಾಢವಾದ ಸ್ನೇಹ. ಜನತಾ ಪಕ್ಷ ಸ್ಥಾಪನೆ ಆದಾಗ ನನ್ನ ಜೊತೆಗೆ ಇದ್ದರು. ನಂತರ ಜೆಡಿಎಸ್ ಪಕ್ಷ ಸ್ಥಾಪನೆ ಆಯಿತು ಆಗಲೂ ನನನ್ನು ಬಿಡದೆ ನನ್ನ ಜೊತೆಗೆನೇ ಇದ್ದವರು ರಾಮಭಾವು. ಇನ್ನು ಅವರಿಗೆ ವಿರೇಂದ್ರ ಪಾಟೀಲ್ ಹಾಗೂ ರಾಮಕೃಷ್ಣ ಹೆಗಡೆ ಅವರಿಂದ ಬಹಳಷ್ಟು ಒತ್ತಡಗಳಿದ್ದರೂ ನನ್ನ ಬಿಟ್ಟಿರಲಿಲ್ಲ. ನನ್ನ ಜೀವನದಲ್ಲಿ ರಾಮಭಾವು ಅವರಿಂದ ಬಹಳಷ್ಟು ವಿಷಯಗಳನ್ನ ಕಲತಿದ್ದೆನೆ. ನನ್ನ ಜೊತೆಗಿದ ಹಲವಾರು ಸ್ನೇಹತರಿಲ್ಲಿ ರಾಮಭಾವು ಅವರಿಗೆ ವಿಶೇಷ ಸ್ಥಾನವಿದೆ. ೪೫ ವರ್ಷದಿಂದ ನಮ್ಮ ಸ್ನೇಹ ಸಂಬಂಧ ಬೆಳೆದು ಬಂದಿದೆ. ಪ್ರತಿ ಬಾರಿ ಬೆಳಗಾವಿಗೆ ಬಂದರೆ ಅವರನ್ನ ಭೇಟಿ ಮಾಡುತಿದ್ದೆ,
ಪ್ರಾಮಾಣಿಕ, ನಿಷ್ಠಾವಂತ, ಶಿಸ್ತಿನ ರಾಜಕಾರಣಿ. ನನ್ನ ರಾಜಕೀಯ ಜೀವನದಲ್ಲಿ ಖಂಡ ನಿಷ್ಠಾವಂತ ವ್ಯಕ್ತಿ. ಸಭಾಪತಿಯಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ ಎಂದರು.
ಅವರ ಕೆಲಸದ ಬಗ್ಗೆ ಯಾರು ಪ್ರಶ್ನೆ ಮಾಡುವಂತ್ತಿರಲಿಲ್ಲ. ನನ್ನ ಜೀವನದ ಅತ್ಯಂತ ಪ್ರಮುಖರಲ್ಲಿ ಒಬ್ಬರಾಗಿದ್ದರು ಎಂದರು

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *