Breaking News

ಸದ್ದಿಲ್ಲದೇ ರಾಮದುರ್ಗ ಪಟ್ಟಣಕ್ಕೆ ಹರಿದು ಬಂತು ನವೀಲು ತೀರ್ಥ..

‌ಬೆಳಗಾವಿ -ಸವದತ್ತಿಯ ನವೀಲ ತೀರ್ಥ ಡ್ಯಾಂ ನಿಂದ ಸವದತ್ತಿ ತಾಲೂಕಿನ  ಆರು ಗ್ರಾಮಗಳಿಗೆ ರಾಮದುರ್ಗ ತಾಲೂಕಿನ ಏಳು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಪೂರ್ಣಗೊಂಡಿದ್ದು 40 ಕಿಮೀ ದೂರದಲ್ಲಿರುವ ಸವದತ್ತಿ ನವೀಲ ತೀರ್ಥ ಜಲಾಶಯದಿಂದ ರಾಮದುರ್ಗ ಪಟ್ಟಣಕ್ಕೆ ನೀರು ಹರಿದು ಬಂದಿದೆ

ಬೆಳಗಾವಿ ಜಿಲ್ಲೆಯ ಕುಡಿಯುವ ನೀರು ಸರಬರಾಜು ಮಂಡಳಿಯ ಪ್ರಸನ್ನ ಮೂರ್ತಿ ಈ ಯೋಜನೆಯನ್ನು ಭೀಕರ ಬರಪರಿಸ್ಥಿತಿಯ ಸಂಧರ್ಭದಲ್ಲಿ ಪೂರ್ಣಗೊಳಿಸಿ ಹದಿಮೂರು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಫಲರಾಗಿದ್ದಾರೆ

ಬಸವ ಜಯಂತಿಯ ದಿನ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹಾಗು ರಾಮದುರ್ಗ ಪಟ್ಟಣದ ಹಿರಿಯರು ಮತ್ತು ಜನ ಪ್ರತಿನಿಧಿಗಳು ಗಂಗಾ ಪೂಜೆ ನೆರವೇರಿಸಿ ಸಿಹಿ ಹಂಚಿ ಖುಷಿ ಪಟ್ಟರು

ಸವದತ್ತಿಯ ನವೀಲ ತೀರ್ಥ ಜಲಾಶಯದಿಂದ ಸವದತ್ತಿ ಹಾಗು ರಾಮದುರ್ಗ ತಾಲೂಕಿನ ಒಟ್ಟು ಹದಿಮೂರು ಹಳ್ಳಿಗಳಿಗೆ ನೀರು ಸರಬರಾಜು ಆಗಲಿದೆ ಹದಿಮೂರು ಗ್ರಾಮಗಳ ಪಟ್ಟಿ  ಇಲ್ಲಿದೆ ನೋಡಿ
1. Munavalli
2. Theggihal
3. Jakabal
4. Kitadal
5. Aratagal
6. Basaragi
Of Saudati Taluk and
7. Gonaganur
8. Junapet
9. Halolli
10.Thoragal
11. Kankanavadi
12. Thurunur
13. Sunnal
Of Ramadurga Taluk

ಒಟ್ಟಾರೆ ಭೀಕರ ಬರಗಾಲದ ಸಂಧರ್ಭದಲ್ಲಿ ನವೀಲ ತೀರ್ಥ ಜಲಾಶಯದ ನೀರು ಹದಿಮೂರು ಹಳ್ಳಿಗಳಿಗೆ ಮುಟ್ಟಿರುವದು ಸಂತಸ ತಂದಿದೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *