ಬೆಳಗಾವಿ-ಸಬ್ ಜೈಲ್ ಕಿಟಕಿ ಮುರಿದು ಇಬ್ಬರು ವಿಚಾರಾಧೀನ ಖೈದಿಗಳು ಪರಾರಿಯಾದ ಘಟನೆ ರಾಮದುರ್ಗ ಸಬ್ ಜೈಲ್ ನಲ್ಲಿ ನಡೆದಿದೆ
ಬೈಕ್ ಕಳ್ಳತನ ಆರೋಪದಡಿ
ಸಬ್ ಜೈಲನಲ್ಲಿ ವಿಚಾರಣಾ ಖೈದಿ ಸುರೇಶ ಶರಣಪ್ಪ ಚಲವಾದಿ(೩೬). ಪರಾರಿಯಾದ ಖೈದಿಗಳು
ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಖೈದಿ ಸಂತೋಷ ಶಿವಣ್ಣ ನಂದಿಹಾಳ್ (೩೬) ಮನೆ ಕಳ್ಳತನ ವಿಚಾರಣೆಗಾಗಿ ಕಳೆದ ಮೂರು ತಿಂಗಳಿಂದ ರಾಮದುರ್ಗ ಸಬ್ ಜೈಲ್ ನಲ್ಲಿದ್ದ ವಿಚಾರಣಾ ಖೈದಿ ಪರಾರಿಯಾಗಿದ್ದಾರೆ
ಸಬ್ ಜೈಲದಿಂದ ಪರಾರಿಯಾದ ಖೈದಿಗಳಿಗಾಗಿ ಪೊಲಿಸ್ ಶೋಧ ಕಾರ್ಯ ನಡೆದಿದೆ
ಮದ್ಯರಾತ್ರಿ ಇಬ್ಬರು ಕೈದಿಗಳು ಕಿಟಕಿ ಸಲಾಕೆಗಳನ್ನು ಕಟ್ ಮಾಡಿ ಪರಾರಿಯಾಗಿದ್ದಾರೆ
ಮನೆಗಳ ಕಿಟಕಿ ಬಾಗಿಲು ಮುರಿದು ಕಳ್ಳತನ ಮಾಡಿ ಜೈಲು ಸೇರಿದ್ದ ಚಾಲಾಕಿ ಕಳ್ಳರು ಜೈಲಿನಲ್ಲಿಯೂ ತಮ್ಮ ಕೈಚಳಕ ತೋರಿಸಿ ಜೈಲಿನ ಅಧಿಕಾರಿಳಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ
ಜೈಲಿನಿಂದ ಪರಾರಿಯಾಗಿರುವ ಇಬ್ಬರು ಕೈದಿಗಳ ಪತ್ತೆಗೆ ವಿಶೇಷ ಪೋಲೀಸ್ ತಂಡವನ್ನು ನಿಯೋಜಿಸಲಾಗಿದ್ದು ಪತ್ತೆ ಕಾರ್ಯಾಚರಣೆ ನಡೆದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ