ಬೆಳಗಾವಿ- ಭಾರತ್ದ ಒಕ್ಕೂಟದ ವ್ಯೆವಸ್ಥೆಯಲ್ಲಿ ಗೋವಾ.ಮಹಾರಾಷ್ಟ್ರ ಕರ್ನಾಟಕ ಒಂದೇ ನಾವು ಮೊದಲು ಭಾರತೀಯ ಎನ್ನುವದನ್ನು ತಿಳಿದುಕೊಂಡು ಗೋವಾ ಸರ್ಕಾರ ವರ್ತಿಸಬೇಕು ನೀರಿನ ವಿಷಯದಲ್ಲಿ ರಾಜಕಾರಣ ಮಾಡುವ ಮೂರ್ಖರು ನಾವಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಗೋವಾ ಸಚಿವ ವಿನೋದ ಪಾಳೇಕರ ಹೇಳಿಕೆಗೆ ತಿರಗೇಟು ನೀಡಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಗೋವಾ ನೀರಾವರಿ ಮಂತ್ರಿ ವಿನೋದ ಪಾಳೇಕರ ಅಸಂಬದ್ಧ ಪದಗಳನ್ನು ಬಳಿಸಿ ನಿಂದಿಸಿದ್ದಾರೆ ಎಂದು ನಾವೂ ಅವರನ್ನು ನಿಂದಿಸುವಷ್ಟು ಕೀಳರಲ್ಲ ಕನ್ನಡಿಗರು ಹೃದಯಶ್ರೀಮಂತಿಕೆಯಿಂದ ರಾಷ್ಟ್ರದ ಗಮನ ಸೆಳೆದಿದ್ದು ಗೋವಾ ನೀರಿನ ವಿಷಯದಲ್ಲಿ ರಾಜಕಾರಣ ಮಾಡದೇ ದೇಶ ಒಂದೇ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ರಮೇಶ ಜಾರಕಿಹೊಳಿ ಗೋವಾ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ
ಮಹಾದಾಯಿ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೀಳುಟ್ಟದ ರಾಜಕಾರಣ ಮಾಡುತ್ತಿದ್ದಾರೆ ರಾಜಕೀಯವಾಗಿ ಹತಾಷಗೊಂಡಿರುವ ಯಡಿಯೂರಪ್ಪ ಮಹಾದಾಯಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಸಹಕಾರ ಸಚಿವ ರಮೇಶ ಜಾರಕಿಹೊಳಿ ಆರೋಪಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ