ಬೆಳಗಾವಿ ಕುಂದಾನಗರಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನ ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರ ಸಚಿವ ರಮೇಶ್ ಜಾರಕಿಹೋಳಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಚಿವ ರಮೇಶ್ ಜಾರಕಿಹೋಳಿ ಭಾಷಣ ಮಾಡಿ,
ನಾಡಿನ ಮತ್ತು, ಜಿಲ್ಲೆಯ ಜನತೆಗೆ ಗಣರಾಜ್ಯೋತ್ಸವ ಶುಭಾಶಯ ಕೋರಿ
ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದಡಿ ಸಂವಿಧಾನ ರಚಿಸಿದ್ದಾರೆ.
ಸಂವಿಧಾನದ ಆಸೆಯದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡುತ್ತಿದೆ ನಮ್ಮ ಸರ್ಕಾರ ಅನ್ನಭಾಗ್ಯದಂತಹ ಅನೇಕ ಜನಪ್ರೀಯ ಯೋಜನೆಗಳನ್ನ ಜಾರಿಗೊಳಿಸಿದೆ. ಬೆಳಗಾವಿ ಜಿಲ್ಲೆ ಅಭಿವೃದ್ಧಿ ಒತ್ತು ನೀಡಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೆರೆ ತುಂಬಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ.
ರಾಜ್ಯ ಸರ್ಕಾರದಿಂದ ಕೋಟ್ಯಾಂತರ ರುಪಾಯಿ ಹಣ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಮುಂಜೂರು ಮಾಡಿಸಲಾಗಿದೆ.
ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಲಖನ್ ಗೆ ಗೋಕಾಕ ಕ್ಷೇತ್ರ ಬಿಟ್ಟುಕೊಡಲು ಸಿದ್ಧ
ಗಣರಾಜ್ಯೋತ್ಸದ ಕಾರ್ಯಕ್ರಮ ಮುಗಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಚಿವ ರಮೇಶ ಜಾರಕಿಹೊಳಿ
ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಕಾಂಗ್ರೆಸ್ ಸೇರುವ ವಿಚಾರ ಶ್ರೀಗಳು ಕಾಂಗ್ರೆಸ್ ಸೇರುವುದನ್ನ ಸ್ವಾಗತಿಸುತ್ತಿನೆ ನಾನು ಇವತ್ತು ಮೋಟಗಿಮಠಕ್ಕೆ ಭೇಟಿ ನೀಡುವೆ ಇದು ರಾಜಕೀಯ ಭೇಟಿಯಲ್ಲ ಮೋಟಗಿಮಠ ಶ್ರೀಗಳು ಕಾಂಗ್ರೆಸ್ ಸೇರ್ಪಡೆ ಇನ್ನು ತೀರ್ಮಾನವಾಗಿಲ್ಲ ಶ್ರೀಗಳು ಕಾಂಗ್ರೆಸ್ ಸೇರಿದ್ರೆ ಕೋಮವಾದ ಪಕ್ಷದ ಮುಖವಾಡ ಅನಾವರಣ ಆಗುತ್ತದೆ ಎಂದು ರಮೇಶ ಜಾರಕಿಹೊಳಿ ಹೇಳಿದರು
ಸತೀಶ ಜಾರಕಿಹೊಳಿ ಜೆಡಿಎಸ ಸೇರುವ ವಿಚಾರವಾಗಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಬಿಡಲ್ಲ ಸಹೋದರ ಸತೀಶ ಕಾಂಗ್ರೆಸ್ ಬಿಡ್ತಾರೆ ಅಂತಾ ನನಗೆ ಅನಿಸುವುದಿಲ್ಲ ನನ್ನ ಕಿರಿಯ ಸಹೋದರ ಲಖನ್ ಜಾರಕಿಹೊಳಿಗೆ ರಾಜಕೀಯ ಸ್ಥಾನಮಾನ ಕೊಡಲು ಪ್ರಯತ್ನಿಸುತ್ತಿದ್ದೇನೆ ಈ ನಿಟ್ಟಿನಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆದಿದೆ ಸಹೋದರ ಲಖನ್ ಗಾಗಿ ಗೋಕಾಕ ಮತಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು
ಕಳೆದ ವರ್ಷ ಏನೋ ಮಾತಾಡಲು ಹೋಗಿ ಜಾರಕಿಹೊಳಿ ಸಹೋದರರ ಮಧ್ಯೆ ಜಗಳ ಆರಂಭವಾಗಿದೆ
ಸಹೋದರರ ಮಧ್ಯದ ಜಗಳ ಬಗೆಹರಿಬೇಕು ಇದಕ್ಕಾಗಿ ನಾನು ನನ್ನ ಗೋಕಾಕ ಮತಕ್ಷೇತ್ರವನ್ನ ಬಿಟ್ಟುಕೊಡಲು ಸಿದ್ಧನಾಗಿದ್ದೇನೆ ಎಂದರು
ಅಂಜಲಿ ನಿಂಬಾಳಕರ ಗೆ ಎಂಇಎಸ ಶಾಸಕ ಅರವಿಂದ ಪಾಟೀಲ ಅವಾಜ್ ಹಾಕಿದ ಪ್ರಕರಣ ಕುರಿತು ಮಾದ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ
ಘಟನೆ ಬಗ್ಗೆ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ ಘಟನೆ ವಾಸ್ತವಾಂಶ ಜನ ಅರಿಯದೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು