Breaking News

ರಮೇಶ ಜಾರಕಿಹೊಳಿಗೆ ಬೆಳಗಾವಿ,ಜೊತೆಗೆ ಹುಬ್ಬಳ್ಳಿ ಧಾರವಾಡ ಉಸ್ತುವಾರಿ ….!!!!

ಬೆಳಗಾವಿ- ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಸರ್ಕಸ್ ಸಕ್ಸೆಸ್ ಆದ ಮೇಲೆ ಈಗ ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯ ಪಟ್ಟಿ ಬಿಡುಗಡೆ ಆಗಿದೆ..

ಬೆಳಗಾವಿ ಜಿಲ್ಲೆಯ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲೆಯ ಜೊತೆಗೆ ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಸಿಗುವ ಸಂಭವ ಇದೆ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ ಜಿಲ್ಲೆಯ ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ ಮಹಾರಾಷ್ಟ್ರ ದಲ್ಲಿಯೂ ಮಹಾ ಮಳೆ ಸುರಿಯತ್ತಿದೆ.ಕೃಷ್ಣಾ ನದಿಯ ಒಳ ಹರಿವು ಹೆಚ್ಚಾಗಿದ್ದು ನದೀ ಪಾತ್ರದಲ್ಲಿ ಪ್ರವಾಹದ ಆತಂಕ ಆವರಿಸಿದೆ

ವಿಪರೀತ ಮಳೆಯಿಂದಾಗಿ ಮಾರ್ಕಂಡೇಯ ನದಿ ಪಾತ್ರದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು ಪರಿಹಾರ ಕಾಮಗಾರಿಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಬೇಗನೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿ ಕೆಡಿಪಿ ಸಭೆ ನಡೆಯಬೇಕೆನ್ನುವದು ಜಿಲ್ಲೆಯ ಶಾಸಕರ ಒತ್ತಾಯವಾಗಿದೆ

ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಳಿಕ ಸಚಿವ ಸಂಪುಟದ ಪುನರ್ರಚನೆ ಆಗುವ ಸಂಭವ ಇದೆ ಸಂಪುಟ ಪುನರ್ರಚನೆ ಯಲ್ಲಿ ಬೆಳಗಾವಿ ಜಿಲ್ಲೆಗೆ ಇನ್ನೊಂದು ಮಂತ್ರಿ ಸ್ಥಾನ ಸಿಗಬಹುದೇ ಎನ್ನುವದನ್ನು ಕಾದು ನೋಡಬೇಕಿದೆ

Check Also

ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…

ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …

Leave a Reply

Your email address will not be published. Required fields are marked *