.ಬೆಳಗಾವಿ- ಡಿಕೆಶಿ ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ನಾನು ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡೋದು ತಪ್ಪು.ಡಿಕೆಶಿ ಇರಲಿ ರಮೇಶ ಜಾರಕಿಹೊಳಿ ಇರಲಿ ನಮ್ಮ ಜಿಲ್ಲೆ ನಾವ್ ನೋಡ್ಕೋಬೇಕು ಎಂದು
ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ
ನಗರದ ಸರ್ಕ್ಯುಟ್ ಹೌಸ್ ನಲ್ಲಿ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು
ನಮ್ಮ ಸಮಸ್ಯೆ ಇದ್ದಾಗ ನಾವು ಕರೆದರೆ ಬರಲಿ ಅವರಾಗಿ ಹಸ್ತಕ್ಷೇಪ ಮಾಡಲು ನಾವು ಬಿಡಲ್ಲ. ಡಿಕೆಶಿ ಇರಲಿ ಯಾರೇ ಇರಲಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಬಿಡಲ್ಲ ಎಂದು ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ
ಬೆಳಗಾವಿ ಕಾಂಗ್ರೆಸ್ ನಲ್ಲಿ ಭಿನ್ನಮತ ವಿಚಾರ ಈಗಾಗಲೇ ನಾವು ಚರ್ಚೆ ಮಾಡಿದ್ದೀವಿ. ದಯವಿಟ್ಟು ಅದನ್ನು ಮುಂದುವರೆಸಬೇಡ್ರಿ
ರಾಜಕಾರಣದಲ್ಲಿ ವಾಗ್ವಾದ ಆಗೋದು ಕಾಮನ್ ಅದನ್ನೇ ವೈರತ್ವ ಅಂದುಕೊಂಡ್ರೆ ಮುರ್ಖತನ ಎಂದು ರಮೇಶ ಜಾರಕಿಹಳಿ ಹೇಳಿದರು
ಸತೀಶ್ ಜಾರಕಿಹೊಳಿ ಮೃದುವಾಗಿ ಹೇಳ್ತಾರೆ ನಾನು ಸಿಟ್ಟಿನಿಂದ ಹೇಳ್ತಿನಿ ಇದು ಅವರವರ ಸ್ವಭಾವ ಅದನ್ನೆ ಮಾಧ್ಯಮದವರು ಊಹೆ ಮಾಡಿ ಬರೆದ್ರೆ ಅದು ತಪ್ಪು. ಪಿ.ಎಲ್.ಡಿ ಬ್ಯಾಂಕ್ ಬಗ್ಗೆ ನನಗೆ ಗೊತ್ತಿಲ್ಲ. ಮೂರ್ನಾಲ್ಕು ಜನ ಶಾಸಕರಿದ್ದಾರೆ ಸಮಸ್ಯೆ ಪರಿಹಾರ ಮಾಡ್ಕೋತಾರೆ. ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಚರ್ಚಿಸಲು ಸಂಬಂಧವಿಲ್ಲ. ಹೆಬ್ಬಾಳಕರ್ ನನ್ನ ಜೊತೆ ಮಾತಾಡಿಲ್ಲ. ಸತೀಶ್ ಜಾರಕಿಹೊಳಿ ಮಾತಾಡಿದ್ದಾರೆ ಅವ್ರ ಜೊತೆ ಮಾತಾಡಿದ್ದೀನಿ ಎಂದು ರಮೇಶ್ ಹೇಳಿದ್ರು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಮತವಿರಬೇಕು ಅಂದ್ರೆನೇ ಪ್ರಜಾಪ್ರಭುತ್ವ. ನಾವು ಹೇಳಿದ್ದೆ ತಲೆಯಾಡಿಸೋದಾದ್ರೆ ಹಿಟ್ಲರ್ ಶಾಹಿ ಆಗುತ್ತೆ. ಶೋ ಪೀಸ್ ಗಳ ಮಾತು ಕೇಳಿದ್ರೆ ಕಾಂಗ್ರೆಸ್ ಹಾಳಾಗುತ್ತದೆ. ಬೆಂಗಳೂರಿನಲ್ಲಿ ಹೋಗಿ ಶೋ ಮಾಡೋದಲ್ಲ ಎಂದು ರಮೇಶ್ ಜಾರಕಿಹೊಳಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ