ಬೆಳಗಾವಿ
ಪಿಎಲ್ ಡಿ ಬ್ಯಾಂಕ್ ನಲ್ಲಿ ಶಾಸಕ ಸತೀಶ ಜಾರಕಿಹೊಳಿಗೆ ಅವಮಾನವಾದರೆ ಸತೀಶ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಲಕ್ಷ್ಮೀ ಹೆಬ್ಬಾಳ್ಕರ 90 ಕೋಟಿ ರು. ನೀಡಿರುವ ಸುದ್ದಿ ಹರಿದಾಡುತ್ತಿರುವುದು ದಿಗಿಲು ಬಡಿದಿದೆ.
ಹೆಬ್ಬಾಳ್ಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಮಟ್ಟಕ್ಕೆ ಅವರು ಇಳಿಯುತ್ತಾರೆ ಎಂದು ಊಹಿಸಿರಲಿಲ್ಲ. ಸತೀಶ ಜಾರಕಿಹೊಳಿ ಅವರೇ ಹೆಬ್ಬಾಳ್ಕರ್ ಗೆ ಜಿಲ್ಲಾಧ್ಯಕ್ಷ ಮಾಡಿದರು. ಆಗ ಜಿಲ್ಲಾಧ್ಯಕ್ಷ ಮಾಡಲು ನಾನು ಒಪ್ಪಿರಲಿಲ್ಲ. ಆಕೆಗೆ ಜಾರಕಿಹೊಳಿ ಕುಟುಂಬದವರಿಗೆ ಅಷ್ಟೊಂದು ಹಣ ಸಾಲ ಕೊಡುತ್ತಾರೆಯೇ ?
ಉಪಕಾರ ಮಾಡಿದ್ದು ಯಾರ ಮುಂದೆಯೂ ಹೇಳಬಾರದು. 2007-08 ರಲ್ಲಿ ಗಾಡ್ ಪಾಧರ್ ಯಾರ ಇದ್ದಾರೋ ಗೋತ್ತಿಲ್ಲ. ಅವರ ತಂದೆಗೆ ಕ್ಯಾನ್ಸರ್ ಆದಾಗ ಹಣ ನೀಡಿದ್ದು ನಾನೇ. ಚನ್ನರಾಜ ಹಟ್ಟಿಹೊಳಿ ಹೈದ್ರಾಬಾದ್ ವಿವಿಯಿಂದ ಹಣ ಇಲ್ಲದೆ ಹೊರ ಹಾಕಿದ್ದರು. ಆಗ ಸಹಾಯ ಮಾಡಿದ್ದು ನಾನು. ಹೆಬ್ಬಾಳ್ಕರ್ ಪುತ್ರನ ಶೈಕ್ಷಣಿಕಕ್ಕೆ ಸಹಾಯಮಾಡಿದ್ದೇನೆ.
ಖಾನಾಪುರ ತಮ್ಮ ಗಂಡನ ಮನೆಯ ದಾಳಿಯಾಗಬೇಕಿತ್ತು. ಅವಾಗಲೂ ನಾನು ಸಹಾಯ ಮಾಡಿದ್ದೆ. ಆ ಬೊಮ್ಮಾಯಿ, ಉಮೇಶ ಕತ್ತಿ ರಾಜಕಾರಣದಲ್ಲಿ ಯಾರು ಇಷ್ಟೊಂದು ದ್ವೇಷದ ರಾಜಕಾರಣ ಮಾಡಿಲ್ಲ. ಹೆಬ್ಬಾಳ್ಕರ್ ಇಷ್ಟೊಂದು ನೀಚ ರಾಜಕಾರಣ ಮಾಡುತ್ತಿದ್ದಾರೆ. ಆ ಯಮ್ಮಾಗೆ ಕಾನೂನಿನ ಅರಿವಿಲ್ಲ. ಆಕೆ ಜಾರಕಿಹೊಳಿ ಕುಟುಂಬಕ್ಕೆ ಹಣ ನೀಡುವ ಅವಶ್ಯವಿಲ್ಲ.
ಸಿದ್ದರಾಮಯ್ಯನ ಸರಕಾರದಲ್ಲಿ ಹೆಬ್ಬಾಳ್ಕರ್ ಗೆ ದೆಹಲಿ ತೋರಿಸಿದ್ದು ನಾನು. ನನಗ್ಯಾರು ಮಂತ್ರಿ ಮಾಡಿದ್ದಾರೆ ಎಂದು ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲರಿಗೆ ಕೇಳಿ. ಡಿಕೆಶಿವಕುಮಾರ ನನ್ನ ಗೆಳೆಯ ಅವನಿಗೆ ಆ ಸಂದರ್ಭದಲ್ಲಿ ಮಂತ್ರಿ ಮಾಡಲು ನಾನೇ ಸಹಾಯ ಮಾಡಿದ್ದೆ.
ಹೈಕಮಾಂಡ್ ಇದನ್ನು ಹದ್ದಬಸ್ತ ಮಾಡದಿದ್ದರೆ ಜಾರಕಿಹೊಳಿ ಸಹೋದರರು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಐಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ 9 ನಿರ್ದೇಶಕರು ನಮ್ಮ ಜತೆ ಇದ್ದರು.ಆದರೆ ಇದರಲ್ಲಿ ಹೆಬ್ಬಾಳ್ಕರ್ ಕುದುರೆ ವ್ಯಾಪಾರ ನಡೆಸಿದ್ದಾರೆ.ಎಂಬುದು ರಮೇಶ ಜಾರಕಿಹೊಳಿ ಅವರ ಆರೋಪವಾಗಿದೆ