ಬೆಳಗಾವಿ -ನಾನಾಗಲಿ ನನ್ನ ಅಳಿಯಂದರಾಗಲಿ ಗೋಕಾಕಿನ ನಗರಸಭೆಯಲ್ಲಿ ಬ್ರಷ್ಟಾಚಾರ ಮಾಡಿಲ್ಲ ಈ ಬಗ್ಗೆ ಬೇಕಾದ್ರೆ ತನಿಖೆ ಆಗಲಿ ಎಂದು ಗೋಕಾಕ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ್‌ನಲ್ಲಿ ಒತ್ತಾಯಿಸಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ಇಂದು ಗೋಕಾಕಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಂದು
ಸಂಜೆ ಬೆಂಗಳೂರಿಗೆ ತೆರಳಲಿದ್ದು ಎಲ್ಲಾ ನೂತನ ಬಿಜೆಪಿ ಶಾಸಕರು ಮತ್ತು ಸೋತ ಬಿಜೆಪಿ ಅಭ್ಯರ್ಥಿಗಳು ಸೇರಿ ಚರ್ಚಿಸುತ್ತೇವೆ ಕಳೆದ ಒಂದೂವರೆ ತಿಂಗಳಿಂದ ನಾವು ಸೇರಿರಲಿಲ್ಲ ಹೀಗಾಗಿ ಇಂದು ರಾತ್ರಿ ಅಥವಾ ನಾಳೆ ಎಲ್ಲರೂ ಸೇರುತ್ತಿದ್ದೇವೆ. ಕಳೆದ ಒಂದೂವರೆ ತಿಂಗಳಿಂದ ನಾವು 18 ರಿಂದ 20 ಶಾಸಕರು ಸೇರಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು
ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಗೆ ಅನ್ಯಾಯವಾಗಿದೆ
ಕೆಲವೊಂದಷ್ಟು ವಿಚಾರಗಳಿವೆ ಅವುಗಳನ್ನು ಬಹಿರಂಗಪಡಿಸಲಾಗಲ್ಲ ಅವರಿಗೂ ಒಳ್ಳೆಯ ಸ್ಥಾನಮಾನ ಕೊಡಿಸುತ್ತೇವೆ ಗೋಕಾಕ್ ನಗರಸಭೆಯಲ್ಲಾದ ಭ್ರಷ್ಟಾಚಾರ ಆರೋಪ ಬಗ್ಗೆ ತನಿಖೆಗೆ ಆಗ್ರಹಿಸುವೆ
ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ
ನಾನಾಗಲಿ, ನನ್ನ ಅಳಿಯಂದಿರಾಗಲಿ ಭ್ರಷ್ಟಾಚಾರ ಮಾಡಿಲ್ಲ.
ಈ ಬಗ್ಗೆ ತನಿಖೆ ಮಾಡಿ ಭ್ರಷ್ಟಾಚಾರಿಗಳಿಗೆ ಶಿಕ್ಷೆ ಕೊಡಿಸುತ್ತೇವೆ
ನೀರಾವರಿ ಯೋಜನೆ ಬರೀ ಗೋಕಾಕ್ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಅನುಕೂಲ ಆಗುವಂತೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜಲಸಂಪನ್ಮೂಲ ಖಾತೆ ಸಿಗುವ ಮುನ್ಸೂಚನೆ ಬಿಟ್ಟು ಕೊಟ್ಟ ರಮೇಶ್ ಜಾರಕಿಹೊಳಿ
ಯಾವ ಖಾತೆ ಅಂತಾ ನಮಗೆ ಗೊತ್ತಿಲ್ಲ ಊಹಾಪೋಹದ ಮೇಲೆ ಮಾತನಾಡ್ತಿದೀವಿ
ಯಾರಿಗೆ ಯಾವ ಖಾತೆ ಕೊಡಬೇಕೆಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು