ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಗುಂಪಿಗೆ ಬಹುಮತ ಇರಲಿಲ್ಲ ಹೀಗಾಗಿ ಕನ್ನಡಿಗರಿಗೆ ಮುಖಭಂಗವಾಗಿದೆ ಎನ್ನುವ ಪ್ರಶ್ನೆಯೇ ಉದ್ಭವಿಸುವದಿಲ್ಲ ಎಂದು ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಹೇಳಿದ್ದಾರೆ
ಪಾಲಿಕೆಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ನಮ್ಮಲ್ಲಿ ಬಹುಮತ ಇರದಿದ್ದರು ಕಳೆದ ಮೂರು ತಿಂಗಳಿನಿಂದ ನಾವು ಪ್ರಯತ್ನ ಮಾಡಿದ್ದೇವು ಆದರೆ ನಾವು ರಚಿಸಿದ ತಂತ್ರಗಾರಿಕೆ ವಿಫಲವಾಯಿತು ಎಂದು ರಮೇಶ ಜಾರಕಿಹೊಳಿ ಸ್ಪಷ್ಠಪಡಿಸಿದರು
ನಾವು ಮಾಡಿದ ತಂತ್ರಗಾರಿಕೆಯಲ್ಲಿ ಕುತಂತ್ರ ಮಾಡಿದವರು ಯಾರು ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಈ ಬಾರಿ ಯಮಕನಮರ್ಡಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುತ್ತೇವೆ ಸತೀಶ ಜಾರಕಿಹೊಳಿ ರಾಯಚೂರ ಗ್ರಾಮೀಣ ದಿಂದ ಸ್ಪರ್ದೆ ಮಾಡಲಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ