ಬೆಳಗಾವಿ- ಕಳಸಾ, ಬಂಡೂರಿ ಹಾಗೂ ಮಹಾದಾಯಿ ಕಾಮಗಾರಿ ಆರಂಭ ವಿಚಾರ ಕುರಿತು ದೆಹಲಿಗೆ ಹೋಗಲು ವಿಮಾನ ಸೌಲಭ್ಯ ಇಲ್ಲ, ಹೀಗಾಗಿ ಹೋಗಲಾಗಿಲ್ಲ ಶೀಘ್ರದಲ್ಲೇ ರಸ್ತೆಯ ಮೂಲಕವೇ ಅಧಿಕಾರಿಗಳ ಜೊತೆಗೆ ದೆಹಲಿಗೆ ಹೋಗಿ ಕೇಂದ್ರ ಜತೆ ಚರ್ಚೆ ಮಾಡುವದಾಗಿ ಜಲಸಂಪನ್ನೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಜಲಸಂಪನ್ಮೂಲ ಇಲಾಖೆತ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವನಾದ ಬಳಿಕ ರಾಜ್ಯದ ಎಲ್ಲಾ ಜಲಾಶಯಕ್ಕೆ ಭೇಟಿ ನೀಡಿದ್ದೇನೆ. ಏನೆಲ್ಲಾ ಕೆಲಸ ಆಗಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದೇನೆ. ಸಿಎಂ ಯಡಿಯೂರಪ್ಪ ಮಾರ್ಗದರ್ಶನಲ್ಲಿ ಕೆಲಸ ಮಾಡಿದ್ದೇನೆ. ಗೋಕಾಕ್ ತಾಲೂಕಿನಲ್ಲಿ ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣ ವಿಚಾರ, ಈ ಯೋಜನೆಯಿಂದ ಅರಣ್ಯ ಪ್ರದೇಶ, ಗ್ರಾಮಗಳಿಗೆ ಯಾವುದೇ ಹಾನಿ ಇಲ್ಲ ನಿರ್ವಾಣೇಶ್ವರ ದೇವಸ್ಥಾನ ಮುಳುಗಡೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.ಎಂದು ಸಚಿವರು ಭರವಸೆ ನೀಡಿದರು.
ಕುಡಿಯುವ ನೀರು, ಕೆರೆ ತುಂಬುವ ಯೋಜನೆಗೆ ಆದ್ಯತೆ ಕೊಡುತ್ತೇವೆ. ನವಿಲಿ ಡ್ಯಾಂ, ಗಟ್ಟಿ ಬಸವಣ್ಣ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನವಲಿ ಡ್ಯಾಂ ನಿರ್ಮಾಣಕ್ಕೆ ತೆಲಂಗಾಣ, ಆಂಧ್ರಪ್ರದೇಶ ಸರ್ಕಾರದಿಂದ ಸಹಕಾರ ಸಿಕ್ಕಿದೆ ಎಂದರು
ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಶೀಘ್ರದಲ್ಲೇ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ್ ಭೇಟಿ ಮಾಡುತ್ತೇವೆ. ಬೆಂಗಳೂರಿನಲ್ಲಿ ಈ ಬಗ್ಗೆ ಸಭೆ ನಡೆಯಲಿದೆ. ಅಥಣಿ, ಜಮಖಂಡಿ ಭಾಗಕ್ಕೆ ನೀರು ಕಲ್ಪಿಸಲು ಮಹಾರಾಷ್ಟ್ರ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತೇವೆ .ಎಂದು ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದರು. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆ ಆಗಿದೆ ಎಂದರು
ಇಂದು ಸಂಜೆ ಜಿಲ್ಲಾಧಿಕಾರಿ,ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಜೊತೆ ಬೆಳಗಾವಿಯ ಗಡಿಯಲ್ಲಿರುವ ನಿಪ್ಪಾಣಿ ಚೆಕ್ ಪೋಸ್ಟ್ ಮತ್ತು ಇತರ ಚೆಕ್ ಪೋಸ್ಟಗಳಿಗೆ ಖುದ್ದಾಗಿ ಭೇಟಿ ನೀಡಿ ಪರಶೀಲನೆ ಮಾಡುತ್ತೇನೆ.ಅಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ಸ್ಥಳದಲ್ಲೇ ಸಮಸ್ಯೆಗಳಿಗೆ ಸ್ಪಂದಿಸುವದಾಗಿ ಸಚಿವರು ಭರವಸೆ ನೀಡಿದ್ರು.