ಬೆಳಗಾವಿ- ಉಮೇಶ್ ಕತ್ತಿ ಬಂಡಾಯ ಮಾಡಿಲ್ಲ ಶಾಸಕರಿಗೆ ಊಟ ಮಾಡಿಸಿದ್ದಾರೆ, ಲಾಕ್‌ಡೌನ್ ನಿಂದ ಹೋಟೆಲ್ ಬಂದ್ ಇದ್ದಾವೆ, ಹೀಗಾಗಿ ಉಮೇಶ್ ಕತ್ತಿ ನಿವಾಸದಲ್ಲಿ ಊಟಕ್ಕೆ ಶಾಸಕರು ಸೇರಿದ್ರು ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದುಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸಿ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಈ ಮೊದಲು ಜಗದೀಶ್ ಶೆಟ್ಟರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು, ಆಗಲೂ ನಾನೇ ಜಿಲ್ಲಾ ಉಸ್ತುವಾರಿ ಸಚಿವನಂತೆಯೇ ಇದ್ದೆ ಈಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೂ ಫರಕ್ ಇಲ್ಲ, ಮೂರನೇ ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ, ಒಳ್ಳೆಯ ಸಲಹೆ ಸೂಚನೆ ಯಾರೇ ನೀಡಿದರೂ ಸ್ವೀಕಾರ ಮಾಡ್ತೇನೆ, ಪಕ್ಷಾತೀತವಾಗಿ ಎಲ್ಲರನ್ನೂ ಕರೆದುಕೊಂಡು ಹೋಗ್ತೇನೆ.ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ಕಳೆದ ಬಾರಿ ಪ್ರವಾಹ ವೇಳೆ ಸರ್ಕಾರ ಜಿಲ್ಲಾಡಳಿತ ಏನೇನು ತಪ್ಪು ಮಾಡಿತ್ತು ಅದನ್ನ ಸರಿಪಡಿಸುವೆ, ನೇಕಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇನೆ.
ಬಿಜೆಪಿ ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮಹಾನ್ ನಾಯಕರು ಅವರ ಬಗ್ಗೆ ಗೌರವವಿದೆ ಅವರ ಬಗ್ಗೆ ಮಾತನಾಡಲ್ಲ, ಸಿದ್ದರಾಮಯ್ಯ ಕಣ್ಣು ಹಳದಿ ಇದೆ ಅವರು ಹಾಗೇ ನೋಡಲಿ ಬಿಡಿ ಎಂದರು ರಮೇಶ್ ಜಾರಕಿಹೊಳಿ.
ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ – ರಮೇಶ್ ಕತ್ತಿ ಪೈಪೋಟಿ ವಿಚಾರವಾಗಿ ಮಾದ್ಯಮ ಮಿತ್ರರು ಪ್ರಶ್ನಿಸಿದಾಗ ಈ ಕುರಿತು,ನಮ್ಮ ಅನಿಸಿಕೆ ಹೈಕಮಾಂಡ್‌ಗೆ ತಿಳಿಸಿದ್ದೇವೆ ಅದನ್ನು ಬಹಿರಂಗವಾಗಿ ಹೇಳಕ್ಕಾಗಲ್ಲ , ಅದನ್ನು ಪಕ್ಷ ನಿರ್ಧರಿಸುತ್ತೆ, ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತೆ ಅದಕ್ಕೆ ನಾವು ಬದ್ಧರಾಗಿದ್ದೇವೆ.ಎಂದರು
ನಮ್ಮ ಮುಖ್ಯಮಂತ್ರಿ ಚಿಕ್ಕವರಿದ್ದಾಗಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ, ಇಂತಹದ್ದನ್ನ ಬಹಳ ಫೇಸ್ ಮಾಡಿದಾರೆ, ಸಮಸ್ಯೆ ಬಗೆಹರಿಸುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಜೆ ಭೂಮಿ ಎಲ್ಲಿ ಕೊಡ್ತೀರಾ ಎಂದು ಪ್ರಶ್ನಿಸಿದಾಗ,ಈ ಹಿಂದೆ ಗಡಿಬಿಡಿಯಲ್ಲಿ ಈ ಕುರಿತು ಇಂದು ಆರ್ಡರ್ ಪಾಸ್ ಆಗಿತ್ತು,ಈಗ ಈ ಆರ್ಡರ್ ಹಿಂದಕ್ಕೆ ಪಡೆದಿದ್ದೇವೆ,ಹೈವೇ ಪಕ್ಕದಲ್ಲಿ ಹೊಸ ಜಾಗ ಕೊಡ್ತೇವಿ,ಈ ಕುರಿತು ಹೊಸ ಆರ್ಡರ್ ಪಾಸ್ ಮಾಡ್ತೀವಿ ,ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದರು.