ಬೆಳಗಾವಿ- ಬೆಳಗಾವಿ ಎಪಿಎಂಸಿ ಯಲ್ಲಿ ಬಿಜೆಪಿ ಕೇವಲ ಒಂದೇ ಸ್ಥಾನ ಹೊಂದಿತ್ತು,ಹೀಗಾಗಿ ಅಲ್ಲಿ ಏನೂ ಮಾಡಲು ಸಾದ್ಯವಿರಲಿಲ್ಲ,ಯುವರಾಜ್ ಕದಂ ಅವರನ್ನು ಅದ್ಯಕ್ಷ ಮಾಡಿದ್ದು ನಾನೇ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾಡಿದ ಅವರು ಹೆಚ್ ವಿಶ್ವನಾಥ,ಮತ್ತು ಉಮೇಶ್ ಕತ್ರಿ ಅವರಿಗೆ ಸ್ಥಾನಮಾನ ನೀಡುವ ಕುರಿತು ಬಿಜೆಪಿ ಹೈಕಮಾಂಡ ನಿರ್ಧರಿಸುತ್ತದೆ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ ಈ ಕುರಿತು ಏನೂ ಹೇಳುವದಿಲ್ಲ ಎಂದರು.
ತೈಲಬೆಲೆ ಹೆಚ್ಚಳ ಕುರಿತು ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡುತ್ತಿದೆ ಎಂದು ಮಾದ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ,ವಿರೋಧ ಪಕ್ಷಗಳು ತಮ್ಮ ಕೆಲಸ ಮಾಡುತ್ತಿದ್ದಾರೆ.ನಾವೂ ಜೀವಂತ ಇದ್ದೇವೆ ಎಂದು ತೋರಿಸುತ್ತಿದ್ದಾರೆ,ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದೆ ಅನ್ನೋದು ದೇಶದ ಜನರಿಗೆ ಗೊತ್ತಿದೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ,ಶೀಘ್ರದಲ್ಲಿಯೇ ಬಡವರ ಪರವಾಗಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ಲಕ್ಷ್ಮೀ ಹೆಬ್ಬಾಳಕರ ಅವರು ನಿಮ್ಮ ಸವಾಲು ಸ್ವೀಕರಿಸಿದ್ದಾರೆ ಎಂದು ಕೇಳಿದಾಗ ,ಛೇಡಿಸಿದರೆ ಒಂದು ಇರುವೆ ಕೂಡಾ ಪ್ರತಿಕ್ರಿಯಿಸುತ್ತದೆ,ಅದೇನು ದೊಡ್ಡ ಕೆಲಸ ಅಲ್ಲ,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಲಾಭವಾಗುವ ನಿರ್ಣಯ ಕೈಗೊಳ್ಳುತ್ತೇನೆ.ಎಂದು ರಮೇಶ್ ಜಾರಕಿಹೊಳಿ ಹೇಳಿದರು.