ಬೆಳಗಾವಿ-ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತ್ರತ್ವದ ಕರ್ನಾಟಕದ ನಿಯೋಗ ಇಂದು ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲರನ್ನು ಮುಂಬಯಿಯಲ್ಲಿ ಭೇಟಿ ಮಾಡಿ ನೀರಾವರಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದೆ.
ವಿಶೇಷ ವಿಮಾನದ ಮೂಲಕ ಮುಂಬಯಿ ಗೆ ತೆರಳಿದ ನಿಯೋಗ ಮಹಾರಾಷ್ಟ್ರ ದ ನೀರಾವರಿ ಸಚಿವರ ಜೊತೆ ನೀರಾವರಿ ಸಮಸ್ಯೆಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದೆ,ಜೊತೆಗೆ ನೆರೆ ನಿರ್ವಹಣೆ ಕುರಿತು ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆಯೂ ನಿಯೋಗ ಸಭೆ ನಡೆಸಿದೆ.
ಬೇಸಿಗೆ ಅವಧಿಯಲ್ಲಿ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವದು,ಮಹಾಪೂರದ ಸಂಧರ್ಭದಲ್ಲಿ ಕರ್ನಾಟಕ ನೀರಾವರಿ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸುವದು,ಗಡಿ ಭಾಗದ ನೀರಾವರಿ ಯೋಜನೆಗಳ ಸಮಸ್ಯೆಗಳನ್ನು ಶಾಸ್ವತವಾಗಿ ಬಗೆಹರಿಸುವದು ಸೇರಿದಂತೆ ಹಲವಾರು ವಿಷಯಗಳು ಮುಂಬಯಿ ಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪವಾಗಿವೆ.
ಗಡಿ ಭಾಗದ ನೀರಾವರಿ ಸಮಸ್ಯೆಗಳ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರದ ನೀರಾವರಿ ಇಲಾಖೆಗಳ ನಡುವೆ ಸೌಹಾರ್ದತೆಯ ಮಾತುಕತೆ ನಡೆದಿದ್ದು ಕರ್ನಾಟಕದ ಮನವಿಗೆ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.ಎಂದು ತಿಳಿದು ಬಂದಿದೆ.