Breaking News

ಮೂರ್ತಿ ವಿವಾದ ಬಗೆ ಹರಿಸಿ ಜನಮನಗೆದ್ದ ಸಾಹುಕಾರ್….!

ಬೆಳಗಾವಿ-ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸರ್ಕಾರ ಉರುಳಿಸುತ್ತಾರೆ ಅಂದಾಗ,ಯಾರೂ ನಂಬಿರಲಿಲ್ಲ,ಸರ್ಕಾರ ಬೀಳಿಸಿದ ಬಳಿಕ ಅವರು ಜಲಸಂಪನ್ಮೂಲ ಮಂತ್ರಿ ಆಗ್ತಾರೆ ಎನ್ನುವ ಮಾತು ಕೇಳಿ ಬಂದಾಗಲೂ,ಆ ಖಾತೆ ನಿಭಾಯಿಸಲು ಅವರಿಂದ ಸಾದ್ಯವೇ ಇಲ್ಲ ಎಂದವರಿಗೆ ರಮೇಶ್ ಜಾರಕಿಹೊಳಿ ನಾನ,ಬ್ಯಾರೇ ನನ್ನ ಸ್ಟೈಲೇ ಬ್ಯಾರೇ ಅಂತ ತೋರಿಸಿಕೊಟ್ಟಿದ್ದಾರೆ.

ಬಿಜೆಪಿ ಸರ್ಕಾರ ರಚಿಸಿದ್ದಾಯ್ತು ಅವರು ಜಲಸಂಪನ್ಮೂಲ ಖಾತೆಯ ಮಂತ್ರಿ ಆಗಿದ್ದೂ ಆಯ್ತು,ಜಲ ಸಂಪನ್ಮೂಲ ಮಂತ್ರಿಯಾಗಿ,ಕೋವಿಡ್ ಲಾಕ್ ಡೌನ್ ನಡುವೆಯೂ ಮಹಾಮಾರಿ ಕೊರೋನಾಗೆ ಅಂಜದೇ ರಾಜ್ಯಾದ್ಯಂತ ಸಂಚರಿಸಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಪರಶೀಲನೆ ಮಾಡುವ ಮೂಲಕ ಜಲಸಂಪನ್ಮೂಲ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ವಿರೋಧಿಗಳಿಗೆ ಕೆಲಸದ ಮೂಲಕವೇ ಉತ್ತರ ನೀಡಿದ್ದಾರೆ ರಮೇಶ್ ಜಾರಕಿಹೊಳಿ.

ಕಳಸಾ ಬಂಡೂರಿ,ಮಹಾದಾಯಿ ಯೋಜನೆಯ ಕುರಿತು ನಡೆದಿರುವ ಕಾನೂನಾತ್ಮಕ ಬೆಳವಣಿಗೆಗಳ ಮೇಲೆಯೂ ನಿಗಾ ಇಡಲು ಲಾಕ್ ಡೌನ್ ಮದ್ಯೆಯೂ ವಿಮಾನ ಹಾರಾಟ ಬಂದ್ ಇದ್ದಾಗ್ಯೂ ರಸ್ತೆಯ ಮೂಲಕ ದೆಹಲಿಗೆ ತೆರಳಿ ಕಾನೂನಾತ್ಮಕ ಹೋರಾಟದಲ್ಲೂ ಮಂತ್ರಿ ಪದವಿ ಪಡೆದ ಕೆಲವೇ ದಿನಗಳಲ್ಲಿ ಯಶಸ್ಸು ಕಂಡಿದ್ದಾರೆ .

ಕಳಸಾ ಬಂಡೂರಿ ನಾಲಾ ಯೋಜನೆಗೆ ಪರಿಸರ,ಮತ್ತು ಅರಣ್ಯ ಇಲಾಖೆ ಅನುಮತಿಗಾಗಿ ಸಮಂಧಿಸಿದ ಮಂತ್ರಿಗಳಿಗೆ ಪತ್ರ ಬರೆದು ಹಲವು ಬಾರಿ ಆ ಮಂತ್ರಿಗಳನ್ನು ಭೇಟಿಯಾಗಿ ಒತ್ತಡ ಹೇರಿದ ಪರಿಣಾಮ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿಗಾಗಿ ಹೊಸ ಮಾರ್ಗಸೂಚಿ ಪ್ರಕಾರ ಹೊಸ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಕೇಂದ್ರದಿಂದ ರಾಜ್ಯಕ್ಕೆ ಪತ್ರ ಬಂದಿರುವದು ಸಮಾಧಾನಕರ ಸಂಗತಿ

ಈ ವರ್ಷ ಮಳೆ ಪ್ರಮಾಣ ಹೆಚ್ಚಾಗಬಹುದು ಎಂಬ ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ,ಈ ವರ್ಷ ಕೃಷ್ಣಾ ತೀರದಲ್ಲಿ ಪ್ರವಾಹ ಬರಬಾರದು,ಮಳೆ ಹೆಚ್ಚಾದರೆ ಯಾವ ರೀತಿ ಕರ್ನಾಟಕ ಮತ್ತು ಮಹಾರಾಷ್ಟ್ರ ಯಾವ ರೀತಿ ಮುಂಜಾಗೃತೆ ವಹಿಸಬೇಕು ಎರಡೂ ರಾಜ್ಯಗಳು ಈ ವಿಷಯದಲ್ಲಿ ಯಾವ ರೀತಿ ಸಮನ್ವಯತೆ ಸಾಧಿಸಬೇಕು ಎನ್ನುವದರ ಬಗ್ಗೆ ಖುದ್ದಾಗಿ ಹಲವಾರು ಬಾರಿ ಮುಂಬಯಿ ಗೆ ತೆರಳಿ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರು ಮತ್ತು ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ಮಾಡಿದ ಪರಿಣಾಮವೇ ಈ ವರ್ಷ ಪ್ರವಾಹ ಬರಲಿಲ್ಲ,ಇದಕ್ಕೆ ಸಚಿವ ರಮೇಶ್ ಜಾರಕಿಹೊಳಿ‌ ಅವರ ಮುಂದಾಲೋಚನೆಯೇ ಕಾರಣ

ಪ್ರವಾಹವನ್ನೇ ಗೆದ್ದ ಬಳಿಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ್ ಜಾರಕಿಹೊಳಿ,ಅವರ ಎದುರುವ ಪೀರನವಾಡಿಯ ರಾಯಣ್ಣನ ಮೂರ್ತಿ ವಿವಾದ ದೊಡ್ಡ ಸವಾಲಾಗಿತ್ತು,ಈ ವಿವಾದ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುವ ಮಟ್ಟಕ್ಕೆ ಬೆಳೆದಿತ್ತು,ಈ ವಿವಾದವನ್ನು ಸರ್ಕಾರದಿಂದ ಬಗೆಹರಿಸಲು ಸಾದ್ಯವೇ ಇಲ್ಲ ಎನ್ನುವ ಮಟ್ಟಿಗೆ ಹೋಗಿದ್ದ ಮೂರ್ತಿ ವಿವಾದವನ್ನು,ಪರೋಕ್ಷ ಮತ್ತು ಅ ಪರೋಕ್ಷವಾಗಿ ಹಲವಾರು ಗಟ್ಟಿ ನಿರ್ಧಾರಗಳನ್ನು ತೆಗೆದು ಕೊಳ್ಳುವದರ ಮೂಲಕ ಚಾಣಕ್ಯನ ತಂತ್ರ ಅನುಸರಿಸಿ ಮೂರ್ತಿ ವಿವಾದವನ್ನು,ರಾಯಣ್ಣ,ಮತ್ತು ಶಿವಾಜಿ ಅಭಿಮಾನಿಗಳಿಗೆ ನೋವಾಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸುವಲ್ಲಿ ಮಾಸ್ಟರ್ ಮೈಂಡ್ ನಂತೆ ಕೆಲಸ ಮಾಡಿದವರೇ ಸಚಿವ ರಮೇಶ್ ಜಾರಕಿಹೊಳಿ,ಹಿರಿಯ ಸಚಿವ ಈಶ್ವರಪ್ಪ ರಮೇಶ್ ಜಾರಕಿಹೊಳಿ ಅವರ ಬೆನ್ನು ತಟ್ಟಿದ್ದು ಅದಕ್ಕಾಗಿಯೇ.

ಜಲಸಂಪನ್ಮೂಲ ಖಾತೆ ಇರಲಿ,ಪ್ರವಾಹ ಇರಲಿ,ಗಡಿ ತಂಟೆ ಇರಲಿ,ಅಥವಾ ಇನ್ಯಾವುದೋ ಸಮಸ್ಯೆ ಇರಲಿ ನಾನು ಎಲ್ಲದಕ್ಕೂ ಸಿದ್ಧ,ಸಮರ್ಥ ಎನ್ನುವ ಸಂದೇಶವನ್ನು ರಮೇಶ್ ಜಾರಕಿಹೊಳಿ ನೀಡಿದ್ದಾರೆ. ಹಮ್ ಕಿಸಿ ಸೇ ಕಮ್ ನಹೀ ಅಂತಾ ಅವರ ರಾಜಕೀಯ ವಿರೋಧಿಗಳಿಗೆ ತೋರಿಸಿ ಕೊಟ್ಟಿದ್ದಾರೆ ಸಾಹುಕಾರ್ ರಮೇಶ್ ಜಾರಕಿಹೊಳಿ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *