Breaking News

ವರಿಷ್ಠರು ಹೇಳೋಕೆ ಅವರೇನು ಅಂತಹ ದೊಡ್ಡ ಲೀಡರಾ…???

ಬೆಳಗಾವಿ-ಸಂಕ್ರಾಂತಿ ಬಳಿಕ ಉತ್ತರಾಯಣ ಕಾಲದಲ್ಲಿ ಎಲ್ಲವೂ ಬದಲಾಗುತ್ತೆ ಎಂಬ ಯತ್ನಾಳ್ ಹೇಳಿಕೆ ವಿಚಾರ ಅದುಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕ ವಿಚಾರ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದ ರಮೇಶ್ ಜಾರಕಿಹೊಳಿ‌ ಹೇಳಿದರು.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಸಿಎಂ ಬದಲಾವಣೆ ಇಲ್ಲ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ, ಪದೇಪದೇ ಈ ಬಗ್ಗೆ ಕೇಳದೇ ಈ ವಿಚಾರ ಕ್ಲೋಸ್ ಮಾಡಿಬಿಡಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ.ಮುಂದಿನ ಎರಡೂವರೆ ವರ್ಷ ಸಿಎಂ ಆಗಿ ಬಿಎಸ್‌ವೈ ಮುಂದುವರೀತಾರೆ, ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು ಸಚಿವ ರಮೇಶ್ ಜಾರಕಿಹೊಳಿ.

ಬಿಜೆಪಿ ಚಿಹ್ನೆ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಬೆಂಗಳೂರು, ಮಂಗಳೂರು ಪಾಲಿಕೆ ವಿಚಾರ ಬೇರೆ, ಬೆಳಗಾವಿಯ ಸಮಸ್ಯೆ ಬೇರೆ ಇದೆ, ವರಿಷ್ಠರ ಜೊತೆ ಚರ್ಚಿಸಿ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಕಾಂಗ್ರೆಸ್ ಚಿಹ್ನೆ ಮೇಲೆ ಸ್ಪರ್ಧೆ ಮೇಲೆ ಮಾಡೋದಾದರೆ ಮಾಡಲಿ ಬಿಡಿ,ಎಂದ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಅಧಿಕೃತ ಪ್ರಕಟಣೆಯಲ್ಲಿ ಬೆಳಗಾವಿ ಬದಲು ಬೆಳಗಾಂ ಎಂದು ಪದ ಬಳಕೆ ವಿಚಾರ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಈ ಬಗ್ಗೆ ಪ್ರತಿಕ್ರಿಯಿಸೋದು ಸೂಕ್ತ ಅಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರ, ನಮ್ಮ ಭಾರತ ದೇಶದಲ್ಲಿ ಎಲ್ಲಾ ಧಾರ್ಮಿಕ ಭಾವನೆ ಮೇಲೆ ನಡೆಯುತ್ತೆ, ಹೀಗಾಗಿ ಕೆಲವೊಂದು ಅಡೆ ತಡೆಗಳು ಬಂದಿವೆ, ಅದನ್ನು ಸಿಎಂ ನೋಡಿಕೊಂಡು ಸರಿಪಡಿಸುತ್ತಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರ,ದಿ.ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ಕೊಟ್ಟರೇ ಒಳ್ಳೆಯದು ಅಂತಾ ಹೇಳಿದ್ದೇವೆ, ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೋ ಅವರ ಪರ ಕೆಲಸ ಮಾಡುತ್ತೇವೆ. ಗಟ್ಟಿಯಾಗಿ ದುಡಿದು ಆ ಅಭ್ಯರ್ಥಿ ಆರಿಸಿ ತರುವ ಕೆಲಸ ಮಾಡ್ತೇವೆ,ಶ್ರದ್ಧಾ ಶೆಟ್ಟರ್ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗಿ ವಿಚಾರ, ಅವರು ಪಕ್ಷದ ಕಾರ್ಯಕರ್ತ, ಸುರೇಶ್ ಅಂಗಡಿ ಪುತ್ರಿಯಾಗಿ ಪಾಲ್ಗೊಂಡಿದ್ದಾರೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೆಂಬಲಿಗರಿಂದ ಕ್ಯಾಲೆಂಡರ್‌ಗಳ ವಿತರಣೆ ವಿಚಾರದ ಕುರಿತು ಮಾದ್ಯಮಗಳು ಪ್ರಶ್ನಿಸಿದಾಗ,ಕ್ಯಾಲೆಂಡರ್ ವಿತರಣೆ ಮಾಡೋದು ಏನು ಮಹಾ ಅಪರಾಧಾನಾ ಅದು, ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಿಜೆಪಿ ಪಡೆಯಬೇಕೆಂದು ಸಂಕಲ್ಪ ಮಾಡಿದ್ದೇವೆ.
ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ, ಗೆಲ್ಲುವುದು, ಬಿಡುವುದು ಮುಂದಿನ ವಿಚಾರ, ಅದನ್ನು ಮತದಾರರು ನಿರ್ಣಯ ಮಾಡ್ತಾರೆ ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತನಾಡಬೇಡ ಅಂತಾ ವರಿಷ್ಠರು ವಾರ್ನಿಂಗ್ ಇದೆಯಾ..?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಶಾಸಕಿ ಬಗ್ಗೆ ಮಾತನಾಡಬೇಡ ಅಂತಾ ವರಿಷ್ಠರು ಹೇಳಿದ್ದಾರೆ ಅಂತಾ ನಾನು ಹೇಳಿಲ್ಲ, ನನ್ನ ಹಿತೈಷಿಗಳು ಹೇಳಿದ್ದಾರೆ ಅಂತಾ ಹೇಳಿದ್ದೇನೆ, ನಮ್ಮ ವರಿಷ್ಠರು ಶಾಸಕಿಗೆ ಏನು ಸಂಬಂಧ? ವರಿಷ್ಠರು ಏಕೆ ಹೇಳ್ತಾರೆ? ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡಬೇಡ ಅಂತಾ ಸಲಹೆ ಕೊಟ್ಟಿದ್ದಾರೆ, ಹಿತೈಷಿಗಳು ಸಲಹೆ ಕೊಟ್ಟಿದ್ದಕ್ಕೆ ಆಕೆ ಬಗ್ಗೆ ಮಾತನಾಡೋದನ್ನ ಬಿಟ್ಟಿದ್ದೇನೆ. ವರಿಷ್ಠರು ಹೇಳೋಕೆ ಆಕೆ ಏನು ಅಂತಹ ದೊಡ್ಡ ಲೀಡರಾ? ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *