Breaking News

22 ರಂದು ದೆಹಲಿಗೆ ಹೋಗ್ತೇನೆ,ಚರ್ಚೆ ಮಾಡ್ತೀನಿ….

ಬೆಳಗಾವಿ-ಇದೇ 22 ರಂದು ದೆಹಲಿಗೆ ಪ್ರಯಾಣ ಮಾಡಲಿದ್ದೇನೆ.. ರಾಜ್ಯ ನೀರಾವರಿ ಯೋಜನೆ ಕುರಿತು ಮಾತನಾಡಲಿದ್ದೇನೆ ಎಂದು ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,
ಇಲ್ಲಿ ಪೀಠದ ತಜ್ಞರು ಅಧಿಕಾರಿಗಳು ಜೊತೆಗೆ ಚೆರ್ಚೆ ಮಾಡುತ್ತೇನೆ. ಹಳೆಯ ಭದ್ರ ಮೇಲ್ದಂಡೆ ಯೋಜನೆ ಕೃಷ್ಣ ಮೇಲ್ದಂಡೆ ಯೋಜನೆ , ಮಹದಾಯಿ, ಮೇಕೆ ದಾಟು ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಕುರಿತು ಚೆರ್ಚೆ ಮಾಡುತ್ತೇನೆ.ಕೃಷ್ಣ ಮೇಲ್ದಂಡೆ ಯೋಜನೆ ಗೆ ಅಡ್ಡಿಯಾಗಿರುವ ತಡೆಯಾಜ್ಞೆ ತೆರುವು ಗೊಳಿಸುವ ನಿಟ್ಟಿನಲ್ಲಿ ತಜ್ಞರ ಜೊತೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ರಾಜ್ಯದ10% ಮತ್ತು ಕೇಂದ್ರ 90% ಅನುದಾನ ಹಂಚಿಕೆಯ ಹಳೆಯ ಭದ್ರಾ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. ರಾಜ್ಯದ 60% ಕೇಂದ್ರದ 40%. ಅನುದಾನ ಹಂಚಿಕೆಯ ಕೃಷ್ಣ ಮೇಲ್ದಂಡೆ ಯೋಜನೆಯಲ್ಲೂ ಕೇಂದ್ರದ ಪಾಲು ಹೆಚ್ಚಿಸಲು ಮನವಿ ಮಾಡಲಾಗುತ್ತದೆ,ಭದ್ರ ಮತ್ತು ಕೃಷ್ಣ ಯೋಜನೆಗಳನ್ನು
ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯ ಮಾಡುತ್ತೇನೆ ಎಂದರು

ಸಿಎಂ ಪಾಸಿಟಿವ್ ಆಗಿದ್ದಾರೆ.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಬೇಡಿಕೆ ವಿಚಾರ…ಒಬ್ಬ ಮಂತ್ರಿಯಾಗಿ ಸಿಎಂ ಯಡಿಯೂರಪ್ಪ ತೆಗೆದುಕೊಳ್ಳವ ನಿರ್ಧಾರಕ್ಕೆ ಬದ್ದವಾಗಿರುತ್ತೇನೆ.
ಇತ್ತ ನಮ್ಮ ಸಮಾಜದ ಪ್ರತಿನಿಧಿಯಾಗಿ ನಮ್ಮ ಗುರುಗಳು ತೆಗೆದುಕೊಳ್ಳುವ ನಿರ್ಧಾರಕ್ಕೂ ಭದ್ದವಾಗಿದ್ದೆನೆ. ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು

ಹೆಬ್ಬಾಳ್ಕರ್ ಔಟ್ ಆಪ್ ಮೈಂಡ್…

ಶಾಸಕಿ ಹೆಬ್ಬಾಳ್ಕರ್ ಗೋಕಾಕ ನಿಂದ ಸ್ಪರ್ಧೆ ಮಾಡ್ತನಿ ಎಂಬ ಹೇಳಿಕೆಗೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಮತ್ತೆ ಶಾಸಕಿ ಹೆಬ್ಬಾಳ್ಕರ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ‌ ನಡೆಸಿದ್ದಾರೆಗೋಕಾಕ ನಿಂದ ಸ್ಪರ್ಧೆ ಮಾಡೋದಾದ್ರೆ ಮೋಸ್ಟ್ ವೆಲ್ ಕಮ್. ಅಂತಾ ಹೇಳಿದ್ದೇನೆ.ಹೆಬ್ಬಾಳ್ಕರ್ ಔಟ್ ಆಪ್ ಮೈಂಡ್ ಆಗಿದ್ದಾರೆ, ಅದಕ್ಕೆ ಹೀಗೆ ಮಾತಾನಡುತ್ತಿದ್ದಾರೆ. ಔಟ್ ಆಪ್ ಮೈಂಡ್ ಆದರೆ ಬಸ್ ಸ್ಟಾಂಡ್ ನಲ್ಲಿ ಹುಡಕಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ವ್ಯಂಗ್ಯ್ಯ ವಾಡಿ ದರು

ಮಹಾದಾಯಿ ವಿಚಾರ

ಮಹದಾಯಿ ವಿಚಾರವಾಗಿ ಗೋವಾ ಮತ್ತ ಮಹಾರಾಷ್ಟ್ರ ಸರ್ಕಾರಗಳ ತರಕಾರು ವಿಚಾರ.ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಿದ್ರೆ ನಮಗೆ ಇನ್ನೂ ಜಾಸ್ತಿ ನೀರು ಸಿಗಲಿದೆ. ಮಹದಾಯಿ ವಿಚಾರವಾಗಿ  ನಮ್ಮಲ್ಲಿ ಪಕ್ಷಾತೀತವಾಗಿ ಒಗ್ಗಟ್ಟು ಇದೆ. ಸಿಡಬ್ಲೂಸಿ ಯಿಂದ ಯೋಜನೆಗ ಒಪ್ಪಿಗೆ ಸಿಕ್ಕಿದೆ ಆದಷ್ಟು ಬೇಗಾ ಕೇಂದ್ರ ಅನುಮತಿ ಪಡೆದು ಕಾಮಗಾರಿ ಶುರುಮಾಡುತ್ತೇವೆ.ಎಂದು ಸಚಿವ ರಮೇಶ್ ಜಾರಕಿಹೊಳಿ‌ ತಿಳಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *