ಬೆಳಗಾವಿ-ವಿಧಾನ ಪರಿಷತ್ರಿನ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಪರವಾಗಿ ಮಿಂಚಿನ ಪ್ರಚಾರ ನಡೆಸಿದ್ದಾರೆ.
ದಿನಕ್ಕೊಂದು ತಾಲ್ಲೂಕಿನಲ್ಲಿ ಮಿಂಚಿನ ಓಡಾಟ ನಡೆಸಿರುವ ರಮೇಶ್ ಜಾರಕಿಹೊಳಿ ನಿನ್ನೆ ಗುರುವಾರ ಖಾನಾಪೂರ ತಾಲ್ಲೂಕಿನಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಒಂದೇ ದಿನ ಖಾನಾಪೂರ ತಾಲ್ಲೂಕಿನ 50 ಕ್ಕೂ ಹೆಚ್ವು ಗ್ರಾಮ ಪಂಚಾಯತಿ ಸದಸ್ಯರನ್ನು ಭೇಟಿಯಾಗಿ ಮತಯಾಚನೆ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಾರೆ.
ಖಾನಾಪೂರ,,ಇಟಗಿ,ಬೀಡಿ,ಪಾರಿಶ್ವಾಡ,ನಂದಗಡ,ಕಕ್ಕೇರಿ, ಸೇರಿದಂತೆ,50 ಕ್ಕೂ ಹೆಚ್ವು ಗ್ರಾಮ ಪಂಚಾಯ್ತಿ ಸದಸ್ಯರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ವ್ಯವಸ್ಥಿತ ಪ್ರಚಾರ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಖಾನಾಪೂರ ತಾಲ್ಲೂಕಿನ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು,ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವದು,ನನ್ನ ಸಂಕಲ್ಪ ವಾಗಿದೆ.ಮತದಾರರು ಇಲ್ಲ ಸಲ್ಲದ ವದಂತಿಗಳಿಗೆ ಕಿವಿಗೊಡದೇ ಬಿಜೆಪಿ ಪಕ್ಷದ. ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರನ್ನು ಬೆಂಬಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಬಿಜೆಪಿ ಮುಖಂಡ ಕಿರಣ ಜಾಧವ ರಮೇಶ್ ಜಾರಕಿಹೊಳಿ ಅವರ ಜೊತೆಗಿದ್ದರು.
ಇಂದು ಸವದತ್ತಿ ತಾಲ್ಲೂಕಿನಲ್ಲಿ ಪ್ರಚಾರ ನಡೆಸುತ್ತಿರುವ ರಮೇಶ್ ಜಾರಕಿಹೊಳಿ ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ