Breaking News

ಮಹಾರಾಷ್ಟ್ರ ಪಾಲಿಟೀಕ್ಸ್ ದಲ್ಲಿ ಗೋಕಾಕ್ ಸಾಹುಕಾರ್ ರಿಂಗ್ ಮಾಸ್ಟರ್…!!

ಬೆಳಗಾವಿ: ಚುನಾವಣೆಯ ಬಳಿಕ ಗೋಕಾಕ ಶಾಸಕ, ಬಿಜೆಪಿ ಮುಖಂಡ ರಮೇಶ ಜಾರಕಿಹೊಳಿ ಸುಳಿವು ಇರಲಿಲ್ಲ. ಇದು ಹಲವು ಅನುಮಾಕ್ಕೆ ಕಾರಣವಾಗಿತ್ತು. ಆದರೆ, ಅವರು ಮಹಾರಾಷ್ಟ್ರ ರಾಜಕಾರಣದಲ್ಲಿ ಬ್ಯುಜಿ ಆಗಿದ್ದರು ಎಂಬುದು ಈಗ ಬಹಿರಂಗವಾಗಿದೆ.

ಹೌದು, ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರೀ ಬಿತುಗಾಳಿ ಎದ್ದು ಎನ್ ಸಿಪಿ ಮುಖಂಡ ಅಜಿತ್ ಪವಾರ್ ನೇತೃತ್ವದಲ್ಲಿ 30 ಅಧಿಕ ಶಾಸಕರೊಂದಿಗೆ ದೊಡ್ಡಪ್ಪ ಶರದ್ ಪವಾರ್ ವಿರುದ್ಧವೇ ಬಂಡಾಯ‌ ಸಾರಿ ಬಿಜೆಪಿ-ಶಿವಸೇನಾ ಮೈತ್ರಿ ಸರಕಾರದ ಭಾಗವಾಗಿದ್ದಾರೆ.

ಈ ಆಪರೇಶನ್ ಎನ್ ಸಿಪಿ ಕಾರ್ಯಾಚರಣೆಯಲ್ಲಿ ಗೋಕಾಕ್ ಸಾಹುಕಾರ್ ರಮೇಶ ಜಾರಕಿಹೊಳಿ ಬಿಜೆಪಿ ಪರವಾಗಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.
ಕಳೆದ 15 ದಿನಗಳಿಂದ ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದ ಜಾರಕಿಹೊಳಿ ಅಜಿತ್ ಪವಾರ್ ಬೆನ್ನಿಗೆ ನಿಂತು ಎನ್ ಸಿಪಿ ಶಾಸಕರನ್ನು ಒಗ್ಗೂಡಿಸುವುದು ಸೇರಿದಂತೆ ಇಡೀ ಕಾರ್ಯಾಚರಣೆಯ ಪ್ರಮುಖ ರೂವಾರಿಯಾಗಿದ್ದರು. ಮಹಾರಾಷ್ಡ್ರದ ಮುಖಂಡರು ನೇರವಾಗಿ ಕಾಣಿಸಿಕೊಂಡರೆ ಆ ರಾಜ್ಯದ ಜನತೆಯಲ್ಲಿ ಬಿಜೆಪಿಯ ಬಗ್ಗೆ ತಪ್ಪು ಸಂದೇಶ ಹೋಗಬಾರದು ಎಂಬ ಎಚ್ಚರಿಕೆಯ ಹೆಜ್ಜೆ ಇರಿಸಿದ್ದ ಬಿಜೆಪಿ ಈ ಕಾರ್ಯಾಚರಣೆ ಜವಾಬ್ದಾರಿಯನ್ನು ಗೋಕಾಕ್ ಸಾಹುಕಾರ್ ಹೆಗಲಿಗೆ ವಹಿಸಿತ್ತು ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ.

ಎನ್ ಸಿಪಿ ಮುಖಂಡ ಅಜಿತ್ ಪವಾರ್ 30ಕ್ಕೂ ಅಧಿಕ ಶಾಸಕರೊಂದಿಗೆ ಬಂಡಾಯವೆದ್ದು ಬಿಜೆಪಿ-ಶಿವಸೇನಾ ಮೈತ್ರಿ ಸರಕಾರದಲ್ಲಿ ಸೇರ್ಪಡೆಯಾಗಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದರಿಂದ ಹಿಡಿದು ಈಗ ಎರಡೂ ಬಣಗಳ ಶಕ್ತಿ ಪ್ರದರ್ಶನದ ತನಕ ಅಜಿತ್ ಪವಾರ್ ಅವರಿಗೆ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ.

ಈಗ ಎಲ್ಲವೂ ಅಂದುಕೊಂಡಂತೆ ಸುಸುತ್ರವಾಗಿ ಮುಗಿದಿದ್ದರಿಂದ ರಮೇಶ ಜಾರಕಿಹೊಳಿ ಗೋಕಾಕಗೆ ಮರಳಿ ಈಗ ದೆಹಲಿ ಪ್ರವಾಸದಲ್ಲಿದ್ದು ಅಮೀತ್ ಶಾ ಅವರ ಜೊತೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *