Breaking News

ಮನದಾಳದ ಮಾತನ್ನು ಹೊರಹಾಕಿದ,ಸಾಹುಕಾರ್.

ಬೆಳಗಾವಿ-ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗುವವನಿದ್ದೆ,ಹಿಮಾಲಯದಲ್ಲಿ ಒಂದು ಜಾಗವನ್ನೂ ನೋಡಿ ಬಂದಿದ್ದೆ ,ಪದೇ ಪದೇ ಸೋತರೆ ನಮಗೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ತಮ್ಮ ಮನದಾಳದ ಮಾತನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊರಹಾಕಿದ್ದಾರೆ.

ಇಂದು ಮುಂಜಾನೆ ಗೋಕಾಕಿನಲ್ಲಿ ನಡೆದ ಶೆಟ್ಟರ್ ಅಭಿನಂದಾನ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆಯಲ್ಲಿ ನನಗೆ ಹಿನ್ನಡೆಯಾಗಿತ್ತು.ಕಳೆದ ಒಂದು ವರ್ಷದಿಂದ ನಾನು ಅಸಹಾಯಕನಾಗಿದ್ದೆ.ಅದನ್ನ ಮನಗಂಡು ನಮ್ಮ ಕಾರ್ಯಕರ್ತರು ಈ ಚುನಾವಣೆಯಲ್ಲಿ ಕೆಲಸ ಮಾಡಿದ್ರು,ಮಹಾನಾಯಕ ವಿಷಕನ್ಯೆ ಸೊಕ್ಕಿನ ರಾಜಕಾರಣದ ದರ್ಪ ಜೋರಾಗಿತ್ತು,ಸಿದ್ದರಾಮಯ್ಯ ಬಗ್ಗೆ ನಾನು ಏನು‌ ಮಾತನಾಡೋಲ್ಲ ಅಂದ್ರು.

ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗುವವನಿದ್ದೆ ಹಿಮಾಲಯದಲ್ಲಿ ಒಂದು ಜಾಗವನ್ನೂ ನೋಡಿ ಬಂದಿದ್ದೆ,ಪದೇ ಪದೇ ಸೋತರೆ ನಮಗೆ ತಡೆದುಕೊಳ್ಳಲು ಆಗುವುದಿಲ್ಲ.ಪದೇ ಪದೇ ಸೋತರೆ ನಾವು ಲೀಡರ್ಸ್ ಅಲ್ಲ ನಾಲಾಯಕರು.ಆ ಉದ್ದೆಶದಿಂದ ಎಲ್ಲ ಒರಗೆ ಹಚ್ಚಿ ಚುನಾವಣೆ ಮಾಡಿದ್ವಿ,ಬಿಜೆಪಿ ಕಾರ್ಯಕರ್ತರು ದುಡ್ಡು ನೋಡ್ಲಿಲ್ಲ ಒಂದು ಚಹಾ ನೋಡ್ಲಿಲ್ಲತಾವೇ ಬೈಕ್ ಏರಿ ಮೂಲೇ ಮೂಲೇ ಓಡಾಡಿ ಪ್ರಚಾರ ಮಾಡಿದ್ರು,ಕಾಂಗ್ರೆಸ್ಸಿನವರು ದುಡ್ಡು ತೂರಾಡಿದರುಆದರೆ ನಮ್ಮ ಕಡೆಗೆ ದುಡ್ಡು ಇರಲಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು

ಕಾಂಗ್ರೇಸ್ ನವರು ಜೀಪು ಹೂವು ಅವರೇ ಕೊಟ್ಟು ಕಳಿಸ್ತಿದ್ರು,ನಂತರ ಅವರೇ ಹೂವು ಹಾಕಿಸಿಕೊಳ್ತಿದ್ರು,ಮತ ಹಾಕಿ ಬಂದು ಸಂಜೆ ನಾನು ಅಮೇರಿಕಾಗೆ ಹೋಗಿಬಿಟ್ಟೆ,
ಮೂರನೇ ತಾರೀಕೂ ಸಂಜೆ ನಾನು ವಾಪಸ್ ಬಂದೆ. ಇದನ್ನೆಲ್ಲ ನೋಡಿ ಬಿಪಿ ಶುಗರ್ ಹೆಚ್ಚಾದರೆ ಎನ್ ಮಾಡೊದು ಎಂದ ರಮೇಶ ಜಾರಕಿಹೊಳಿ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *