ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಬೀಸಿದೆ.ಲೋಕಸಭಾ ಚುನಾವಣೆಯ ನಂತರ ರಾಜಕಾರಣದ ಒಳ ಸಂಘರ್ಷ ಈಗ ಬಹಿರಂಗವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಒಳ ಒಪ್ಪಂದ ಆಗಿದೆ.ವಿಜಯೇಂದ್ರ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಮೈಸೂರ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ ವಿಜಯೇಂದ್ರ ಡಿಕೆಶಿ ಉಪಕಾರ ತೀರಿಸಲು ಹೊರಟಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಯತ್ನಾಳ ಗಂಭೀರ ಆರೋಪ ಮಾಡಿದ್ದು, ಅದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಧ್ವನಿಗೂಡಿಸಿದ್ದು, ಈ ಹೇಳಿಕೆ ಮತ್ತು ಬೆಳವಣಿಗೆ ಆಗಿದ್ದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ,
ಅಥಣಿ-ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಡಾ ಹೋರಾಟ ಮಾಡುತ್ತಿರುವದು ಸಿದ್ದರಾಮಯ್ಯ ಇಳಿಸಿ ಡಿಕೆ ಶಿವಕುಮಾರ ಸಿಎಂ ಮಾಡಲು ಡಿಕೆಶಿ ಉಪಕಾರ ತೀರಿಸಲು ಎಂದು ಬಸನಗೌಡ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಡಿಸಿಎಂ ಡಿಕೆ ಶಿವಕುಮಾರ ಆದೇಶದಂತೆ ಬಿಜಿಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆ ಹೊಂದಾಣಿಕೆ ರಾಜಕಾರಣ ಇದೆ. ಡಿ.ಕೆ ಶಿವಕುಮಾರ ಉಪಕಾರ ತೀರಸಲಿಕೆ ಇವತ್ತು ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಮತ್ತು ರಮೇಶ ಜಾರಕಿಹೋಳಿ ಕೇಂದ್ರದಿಂದ ಒಪ್ಪಿಗೆ ಪಡೆದು ಪಾದಯಾತ್ರೆ ಮಾಡುತ್ತಿದ್ದೇವೆ.ಆದರೆ ಎಲ್ಲಿಂದ ಪ್ರತಿಭಟನೆ ಮಾಡಬೇಕೆಂದು ನಿರ್ಣಯವಾಗಿಲ್ಲ ಎಂದರು.
ಬಿಜೆಪಿಯಲ್ಲಿ ಎರಡು ಬಣ ಇಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ದ ಯಾವುದೇ ಒಳ ಒಪ್ಪಂದ ಇಲ್ಲದೇ ನಾವು ಹೋರಾಟ ಮಾಡುತ್ತಿದ್ದೇವೆ. ತಾವು ಮಾಡುವ ಹೋರಾಟ ಭ್ರಷ್ಟರ ವಿರುದ್ದ ಎಂದು ಹೇಳುವ ಮುಲಕ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ, ಹೆಣ್ಣು ಮಕ್ಕಳಿಗೆ 2,000 ಹಣ ಕೂಡಾ ಬಿಡುಗಡೆಯಾಗಿಲ್ಲ. ಭಾಗ್ಯದ ಲಕ್ಷ್ಮೀ ಬೆಳಗಾವಿಯಲ್ಲಿಯೇ ಕುಳತ್ತಿದ್ದಾರೆ. ಲಕ್ಷ್ಮೀ ಅಕ್ಕಾ ದುಡ್ಡು ಕೊಡಲಿಕ್ಕೆ ತಯಾರಿಲ್ಲ. ಲಕ್ಷ್ಮೀ ಅಕ್ಕಾ ದುಡ್ಡರೆ ಕೊಡವ್ವಾ ಇಲ್ಲಾ ಮನಿಗೆ ನಡೀವಾ ಎಂದು ಯತ್ನಾಳ ಲೇವಡಿ ಮಾಡಿದ್ದಾರೆ.
ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಮಾತ್ರ ಬೆಳೆಯುತ್ತಿದ್ದಾರೆ ಎಂದು ಮಾಜಿ ಎಂಪಿ ಪ್ರತಾಪ ಸಿಂಹ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಬೆಳೆಯುತ್ತಿದ್ದರು ನಿಜಾ ಎಂದ ಬಸವನಗೌಡ ಯತ್ನಾಳ ಒಪ್ಪಿಕೊಂಡರು.
ಅಪ್ಪ ಮಕ್ಕಳ ಕಪಿಮುಷ್ಠಿಯಿಂದ ಬಿಜೆಪಿ ಹೊರಗೆ ಬರಲಿ
ಅಥಣಿಯಲ್ಲಿ ಮಾದ್ಯಮಗಳ ಜೊತೆ ಯತ್ನಾಳ ಮಾತನಾಡಿದ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ,ಅಪ್ಪ ಮಕ್ಕಳ ಕಪಿ ಮುಷ್ಠಿಯಿಂದ ಬಿಜೆಪಿ ಹೊರಗೆ ಬರಬೇಕಾಗಿದೆ.ಸಾಮೂಹಿಕ ನಾಯಕತ್ವದಲ್ಲಿ ನಾವು ವಾಲ್ಮೀಕಿ ಹಗರಣದ ವಿರುದ್ಧ ಪಾದಯಾತ್ರೆ ನಡೆಸುತ್ತಿದ್ದೇವೆ.ಬಿಜೆಪಿ ಹೈಕಮಾಂಡ್ ಅನುಮತಿ ಪಡೆದು ನಾವು ಪಾಯಾತ್ರೆಯ ದಿನಾಂಕ ನಿಗದಿ ಮಾಡುತ್ತೇವೆ. ಸಿದ್ರಾಮಯ್ಯ ಸರ್ಕಾರ ದಿವಾಳಿ ಆಗಿದೆ.ಸಿದ್ರಾಮಯ್ಯ ನವರು ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವದು ಒಳ್ಳೆಯದು ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.