ಬೆಳಗಾವಿ-ಪಕ್ಕದ ಮಹಾರಾಷ್ಟ್ರ ದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು,ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಇಂದು NDRF ತಂಡದೊಂದಿಗೆ ಕೃಷ್ಣಾ ನದಿಯಲ್ಲಿ ದೋಣಿ ವಿಹಾರ ಮಾಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.
ನೆರೆಯಿಂದ ಭಾದಿತವಾಗುವ ಪ್ರದೇಶಗಳಿಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದರು.ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕೃಷ್ಣೆಗೆ ಈಗಾಗಲೇ ೧,೮೦ ಕ್ಯೂಸೇಕ್ ನೀರು ಬರ್ತಿದೆ, ಆಲಮಟ್ಟಿಯಿಂದ ಈಗಾಗಲೇ ೨.೨೦ ಕ್ಯೂಸೇಕ್ ನೀರು ಹೊರ ಬಿಡಲಾಗ್ತಿದೆ, ಹೀಗಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕಡಿಮೆ ಇದೆ,
ಈ ಬಾರಿ ಕರೋನ ಸಲುವಾಗಿ ಕಾಳಜಿ ಕೇಂದ್ರಗಳ ಸಂಖ್ಯೆ ಹೆಚ್ಚು ಮಾಡುವಂತೆ ಸೂಚಿಸಿರುವೆ, ಸಮಾಜಿಕ ಅಂತರ ಕಾಯ್ದುಕೊಳ್ಳಲು ಕಾಳಜಿ ಕೇಂದ್ರಗಳ ಸಂಖ್ಯೆ ಸಹ ಜಾಸ್ತಿ ಮಾಡಲಿದ್ದೆವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಕಳೆದ ಬಾರಿ ಜನರಿಗೆ ಪರಿಹಾರ ವಿತರಣೆಯಲ್ಲಿ ತೊಂದರೆ ಆಗಿರುವುದು ನಿಜ, ಅದನ್ನೂ ಸಹ ಅಧಿಕಾರಿಗಳೊಂದಿಗೆ ಚರ್ಚಿಸಿರುವೆ ಶೀಘ್ರವೇ ಪರಿಹಾರ ಕೊಡುತ್ರೇವೆ.ಎಂದು ಸಚಿವರು ಭರವಸೆ ನೀಡಿದರು.
ಚಿಕ್ಕೋಡಿ ತಾಲೂಕಿನ ಯಡೂರು, ಅಂಕಲಿ, ಮಾಂಜರಿ ಗ್ರಾಮಗಳಿಗೆ ಭೇಟಿ ನೀಡಿದ್ರು,ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಚಿವರಿಗೆ ಶಾಸಕ ಗಣೇಶ್ ಹುಕ್ಕೇರಿ,ದುರ್ಯೋಧನ ಐಹೊಳೆ,ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸಾಥ್, ನೀಡಿದರು.