ಬೆಳಗಾವಿ- ಮಲಪ್ರಭಾ ನದಿ ಒತ್ತುವರಿ ಆಗಿದ್ದು ಆದಷ್ಟು ಬೇಗ ಸರ್ವೆ ಮಾಡಲಾಗುವುದು ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಮತ್ತು ಆಲಮಟ್ಟಿಯಲ್ಲಿ ಸಿಎಂ ಸ್ಥಳೀಯ ಜನಪ್ರತಿನಿಧಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ, ಬೆಂಗಳೂರಿಗೆ ಹೋಗಿ ಮತ್ತೊಮ್ಮೆ ಸಭೆ ಮಾಡಿ ಜಿಲ್ಲಾವಾರು ಪರಿಹಾರ ನೀಡಲು ತೀರ್ಮಾನ ಕೈಗೊಳ್ಳುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಮಳೆಯಿಂದಾಗಿ ಹಾನಿಯಾಗಿದೆ ಪ್ರವಾಹದಿಂದ ಹಾನಿಯಾಗಿಲ್ಲ, ಐದು ಜಿಲ್ಲೆಗಳಿಗೆ ಆದಷ್ಟು ಬೇಗ ಪರಿಹಾರ ಕೊಡಲಾಗುತ್ತೆ, ಕಳೆದ ಬಾರಿ ಪರಿಹಾರ ನೀಡುವ ಕುರಿತು ಮನವಿ ಮಾಡಿಕೊಳ್ಳಲಾಗುತ್ತೆ, ನಾಳೆ ರಾಮದುರ್ಗದಲ್ಲಿ ಧರಣಿನಿರತ ನೆರೆ ಸಂತ್ರಸ್ತರ ಭೇಟಿಯಾಗುವೆ,ಎಂದರು
*ಮಲಪ್ರಭಾ ನದಿ ಒತ್ತುವರಿಯಾಗಿದ್ದು ಆದಷ್ಟು ಬೇಗ ಸರ್ವೆ ಮಾಡಲಾಗುವುದು, ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಸರ್ವೆ ಕಾರ್ಯ ಮಾಡಲಾಗುವುದು,ಜೊತೆಗೆ ಬೆಳಗಾವಿ ಜಿಲ್ಲೆಯ 30 ಗ್ರಾಮಗಳ ಸ್ಥಳಾಂತರ ಕುರಿತು ಪರಿಶೀಲನೆ ಮಾಡುತ್ತೇನೆ,ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.