ಬೆಳಗಾವಿ- ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಾಜಕಾರಣ ಗರಿಗೆದರಿದೆ ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ದಿಗ್ಗಜರಲ್ಲಿ ಗುದ್ದಾಟ ಮುಂದುವರೆದಿದೆ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ರಮೇಶ್ ಕತ್ತಿ ಮತ್ತು ಅಣ್ಣಾಸಾಹೇಬ ಜೊಲ್ಲೆ ನಡುವೆ ಪೈಪೋಟಿ ಅಷ್ಟೇ ಅಲ್ಲ ಬಹಿರಂಗ ಗುದ್ದಾಟವೇ ಶುರುವಾಗಿದೆ ಇಬ್ಬರ ಗುದ್ದಾಟದ ನಡುವೆ ಮರಣ ಗೆದ್ದ ಶರಣ ಪ್ರಭಾಕರ ಕೋರೆ ತಮಗೂ ಟಿಕೆಟ್ ಕೊಟ್ಟರೆ ಸ್ಪರ್ದೆ ಮಾಡುತ್ತೇನೆ ಜೊತೆಗೆ ಗೆಲ್ಲುತ್ತೇನೆ ಎನ್ನುವ ಇಂಗಿತ ವ್ಯೆಕ್ತ ಪಡಿಸಿದ್ದಾರೆ
ಕಳೆದ ನಾಲ್ಕು ದಿನಗಳಿಂದ ಅಣ್ಣಾ ಸಾಹೇಬ ಜೊಲ್ಲೆಗೆ ಟಿಕೆಟ್ ಫೈನಲ್ ಆಗಿದೆ ಎನ್ನುವ ಸಂದೇಶವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿದುಬಿಡುತ್ತಿದ್ದಾರೆ
ಕತ್ತಿ ಸಾಕುಕಾರ್ ಅಭಿಮಾನಿಗಳು ನಮ್ಮ ಸಾಹುಕಾರ್ ಬಿಟ್ರೆ ಇನ್ನೊಬ್ಬರಿಗೆ ಟಿಕೆಟ್ ಸಿಗಲು ಸಾಧ್ಯವೇ ಇಲ್ಲ ಸಾಹುಕಾರಗೆ ಟಿಕೆಟ್ ಸಿಗದಿದ್ದರೆ ಚಿಕ್ಕೋಡಿ ಪಾಲಿಟಿಕ್ಸ ಚಿಪ್ಪಾಡಿ ಹರಕ ಆಗುತ್ತದೆ ರಮೇಶ್ ಸಾಹುಕಾರ್ ಗೆ ಬಿಜೆಪಿ ಟಿಕೆಟ್ ಸಿಗೋದು ಗ್ಯಾರಂಟಿ ಎಂದು ವಾದಿಸುತ್ತಿದ್ದಾರೆ
ಅಥಣಿ ಸಾಹುಕಾರ್ ಲಕ್ಷ್ಮಣ ಸವದಿ ಎಲ್ಲ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದು ಉಡಿಯೂರಪ್ಪನವರ ಜೊತೆ ಓಡಾಡತೊಡಗಿದ್ದು ಲೋಕಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಯಾರ ಪರವಾಗಿ ಬ್ಯಾಟಿಂಗ್ ಮಾಡುತ್ತಾರೆ ಯಾರಿಗೆ ಅಡ್ಡಗಾಲು ಹಾಕುತ್ತಾರೆ ಎನ್ನುವದನ್ನು ಸುಲಭವಾಗಿ ಹೇಳಲು ಸಾಧ್ಯವಿಲ್ಲ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಮಹಾನ್ ನಾಯಕರ ನಡುವೆ ಗೂಳಿ ಕಾಳಗವೇ ನಡೆದಿದ್ದು ರಮೇಶ್ ಸಾಹುಕಾರ್ ಗೂಳಿ ಕಾಳಗದಲ್ಲಿ ಮೇಲುಗೈ ಸಾಧಿಸುತ್ತಾರೆ ಎನ್ನುವದು ಕಾಳಗ ವೀಕ್ಷಿಸುತ್ತಿರುವ ಪ್ರೇಕ್ಷಕರ ಅಭಿಪ್ರಾಯವಾಗಿದೆ
ಬಿಜಿಪಿ ಟಿಕೆಟ್ ಕಾಳಗ ಸುಸೂತ್ರವಾಗಿ ಬಗೆಹರೆಯದಿದ್ದರೆ ಚಿಕ್ಕೋಡಿ ಪಾಲಿಟಿಕ್ಸ ಚಿಪ್ಪಾಡಿ ಹರಕ ಆಗೋದು ಖಚಿತ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ