ಬೆಳಗಾವಿ- ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ನಕಲಿ ಪಟ್ಟಿ ಹರಿದಾಡುತ್ತಿರುವ ಬೆನ್ನಲ್ಲಿಯೇ ಮಾಜಿ ಸಂಸದ ರಮೇಶ್ ಕತ್ತಿ ಮೌನ ಮುರಿದಿದ್ದಾರೆ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಇನ್ನೆರಡು ದಿನದಲ್ಲಿ ಆಗಬಹುದು ಆದರೆ ತಮಗೆ ಟಿಕೆಟ್ ಸಿಗೋದು ನಕ್ಕಿ ಎಂದು ರಮೇಶ್ ಕತ್ತಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ರಮೇಶ್ ಕತ್ತಿ ಮತ್ತು ಅಣ್ಣಾಸಾಹೇಬ್ ಜೊಲ್ಲೆ ನಡುವೆ ಗುದ್ದಾಟ ನಡೆದಿದೆ ಟಿಕೆಟ್ ಜೊಲ್ಲೆಗಾ ? ರಮೇಶ್ ಗೆ ಸಿಗುತ್ತಾ? ಎನ್ನುವದರ ಬಗ್ಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಭಿಮಾನಿಗ ನಡುವೆ ಬೆಟ್ಟಿಂಗ್ ಕೂಡಾ ಜೋರಾಗಿ ನಡೆಯುತ್ತಿದೆ.ಎಂದು ತಿಳಿದು ಬಂದಿದೆ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದ್ದು ಈ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಕೊನೆಯ ಘಳಿಗೆಯಲ್ಲಿ ಘೋಷಣೆ ಮಾಡಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ ಹೈಕಮಾಂಡ್ ಕೊನೆಯ ಘಳಿಗೆಯಲ್ಲಿ ಟಿಕೆಟ್ ಘೋಷಣೆ ಮಾಡುವ ಲಕ್ಷಣ ಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ರಮೇಶ್ ಕತ್ತಿ ಮತ್ತು ಅಣ್ಣಾಸಾಹೇಬ್ ಜೊಲ್ಲೆ ಬಿ ಫಾರ್ಮ ಇಲ್ಲದೇ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಸಾಧ್ಯತೆಗಳಿವೆ
ಬಿಜೆಪಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾವಾಗ ಘೋಷಣೆ ಮಾಡುತ್ತದೆಯೋ ಮಾಡಲಿ ಆದರೆ ಬಿ ಫಾರ್ಮ ಸಿಕ್ಕ ಬಳಿಕ ಇನ್ನೊಂದು ನಾಮ ಪತ್ರ ಸಲ್ಲಿಸಬಹುದು ಕೊನೆಯ ಘಳಿಗೆಯವರೆಗೆ ಕಾಯ್ದು ನಾಮಪತ್ರ ಸಲ್ಲಿಸದೇ ಮುಜುಗರ ಮಾಡಿಕೊಳ್ಳೋದು ಬೇಡ ಅಂತಾ ಬಿಜೆಪಿ ಆಕಾಂಕ್ಷಿಗಳು ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸಲು ಮುಂದಾಗಿದ್ದಾರೆ ಎನ್ನುವ ಸುದ್ಧಿ ಚಿಕ್ಕೋಡಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ
ಬಿಜೆಪಿ ನಾಯಕರು ಚಿಕ್ಕೋಡಿ ಕ್ಷೇತ್ರದಲ್ಲಿ ಯಾರಿಗೆ ಶಾಕ್ ಕೊಡಬಹುದು ? ಯಾರನ್ನು ಲಾಕ್ ಮಾಡಬಹುದು ? ಯಾರಿಗೆ ಬಹು ಪರಾಕ್….ಬಹುಪರಾಕ್ ಎನ್ನಬಹುದು ಎನ್ನುವದು ಬೆಳಗಾವಿ ಜಿಲ್ಲೆಯಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ