Breaking News

ರಮೇಶ್ ಕತ್ತಿಗೆ ಅರ್ಜಂಟ್ ಬೆಂಗಳೂರಿಗೆ ಬುಲಾವ್ …!!!

ಬೆಳಗಾವಿ- ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ರಾಜಕೀಯ ಪಕ್ಷಗಳನ್ನು ಹಲವಾರು ಚಿಹ್ನೆಗಳನ್ನು ನೋಡಿರುವ ಕತ್ತಿ ಸಹೋದರರು ಸುಮ್ಮನೆ ಕುಳಿತುಕೊಳ್ಳುವ ನಾಯಕರಲ್ಲ ಬಿಜೆಪಿ ಕೈ ಕೊಟ್ಟ ಹಿನ್ನಲೆಯಲ್ಲಿ ಕತ್ತಿ ಸಾಹುಕಾರರು ಕೈ ಹಿಡಿಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ

ಮಾಜಿ ಸಂಸದ ರಮೇಶ ಕತ್ತಿ ಅವರು ದಿಢೀರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕತ್ತಿ ಸಹೋದರರಿಗೆ ಗಾಳ ಹಾಕಿದ್ದು ಸುಮಾರು ಒಂದು ಘಂಟೆ ಕಾಲ ಕತ್ತಿ ಸಹೋದರರ ಜೊತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದ್ದು ಮಾಜಿ ಮುಖ್ಯಮಂತ್ರಿ ಸಿದ್ರಮಾಯ್ಯ ಕೂಡಾ ಕತ್ತಿ ಸಹೋದರರನ್ನು ಸಂಪರ್ಕಿಸಿದ್ದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕತ್ತಿ ಸಹೋದರರನ್ನು ಸಂಪರ್ಕಿಸಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ .

ಮಾಜಿ ಮಂತ್ರಿ ಉಮೇಶ್ ಕತ್ತಿ ಬೆಲ್ಲದ ಭಾಗೇವಾಡಿಯಲ್ಲೇ ಕುಳಿತುಕೊಂಡು ತಮ್ಮ ಅಭಿಮಾನಿಗಳಿಗೆ ಸಮಾಧಾನ ಹೇಳುತ್ತಿದ್ದಾರೆ ಟಿಕೆಟ್ ಮರು ಪರಶೀಲನೆ ಮಾಡುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎರಡು ದಿನ ಕಾಯ್ದು ನೋಡೋಣ ಎಂದು ಸಮಾಧಾನ ಪಡೆಸುತ್ತಿದ್ದಾರೆ

ಚಿಕ್ಕೋಡಿ ಕ್ಷೇತ್ರದಲ್ಲಿ ಕತ್ತಿ ಸಹೋದರರು ಬಂಡಾಯದ ಬಾವುಟ ಹಾರಿಸುವ ಎಲ್ಲ ಲಕ್ಷಣಗಳು ಕಂಡು ಬಂದಿದ್ದು ಕತ್ತಿ ಸಹೋದರರ ನಡೆ ನಿಗೂಢವಾಗಿದೆ

ಇಂದು ಬೆಳಿಗ್ಗೆ ಜೊಲ್ಲೆ ದಂಪತಿಗಳು ಉಮೇಶ್ ಕತ್ತಿ ಅವರನ್ನು ಭೇಟಿಯಾಗಿ ತಮಗೆ ಆಶಿರ್ವಾದ ಮಾಡುವಂತೆ ಕೋರಿಕೊಂಡಿದ್ದು ಕತ್ತಿ ದಾಹುಕಾರರ ಮನೆಗೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.

ಕತ್ತಿ ಸಹೋದರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಚಿಕ್ಕೋಡಿ ಮತ್ತು ಬೆಳಗಾವಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅದಲು ಬದಲಾಗುವ ಸಾಧ್ಯತೆಗಳಿದ್ದು ಚಿಕ್ಕೋಡಿಯಿಂದ ರಮೇಶ್ ಕತ್ತಿ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಗಳಿದ್ದು ಪ್ರಕಾಶ್ ಹುಕ್ಕೇರಿಯವರಿಗೆ ರಮೇಶ್ ಕತ್ತಿ ಅವರಿಗೆ ಗೆಲ್ಲಿಸುವ ಜವಾಬ್ದಾರಿ ನೀಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದ್ದು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ ಎಸ್ ಸಾಧುನವರ ಅವರನೇ ಮುಂದುವರೆಸಿ ಈ ಕ್ಷೇತ್ರದಲ್ಲಿ ಕತ್ತಿ ಸಹೋದರರ ಬೆಂಬಲ ಪಡೆದು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ನಂಬಲರ್ಹ ಮೂಲಗಳು ದೃಡಪಡಿಸಿವೆ

ಕತ್ತಿ ಸಹೋದರರ ಮುಂದಿನ ನಡೆ ಬೆಳಗಾವಿ ಜಿಲ್ಲೆಯ ರಾಜಕಾರಣದ ದಿಕ್ಸೂಚಿಯನ್ನೇ ಉಲ್ಟಾ ಪಲ್ಟಾ ಮಾಡುವದು ಸತ್ಯ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *