ಬೆಳಗಾವಿ- ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಬೆಳಗಾವಿ ಜಿಲ್ಲೆಯ ಗೋಕಾಕಿನ ಜಾರಕಿಹೊಳಿ ಮನೆತನದಲ್ಲಿ ಈಗ ಮದುವೆಯ ಸಂಬ್ರಮ ಮನೆ ಮಾಡಿದೆ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಸುಪುತ್ರ ಸಂತೋಷ ಅವರ ವಿವಾಹ ನವ್ಹೆಂಬರ ೨೧ ರಂದು ಗೋಕಾಕಿನ ಮಯೂರ ಶಾಲೆಯ ಆವರಣದಲ್ಲಿ ನಡೆಯಲಿದೆ
ಮದುವೆಯ ಆಮಂತ್ರಣ ಪತ್ರಿಕೆ ನೋಡಿದರೆ ಸಾಕು ಮದುವೆ ಎಷ್ಟೊಂದು ಅದ್ಧೂರಿಯಾಗಿ ನಡೆಯಲಿದೆ ಎನ್ನುವದನ್ನು ಕಲ್ಪನೆ ಮಾಡಿಕೊಳ್ಳಬಹುದಾಗಿದೆ ಗೋಕಾಕಿನಲ್ಲಿ ಎರಡು ಹೆಲಿಪ್ಯಾಡ್ ಗಳನ್ನು ನಿರ್ಮಿಸಲಾಗಿದೆ ನವ್ಗೆಂಬರ ೨೧ ರಿಂದಲೇ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಇಡೀ ರಾಜ್ಯಸರ್ಕಾರವೇ ಬೆಳಗಾವಿಗೆ ಆಗಮಿಸುತ್ತಿದೆ ಹೀಗಾಗಿ ಗಣ್ಯಾತಿ ಗಣ್ಯರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ
ಜಾರಕಿಹೊಳಿ ನಿಂತರೆ ಜಾತ್ರೆ ನಡೆದರೆ ಮೆರವಣಿಗೆ ಎನ್ನುವ ಮಾತಿದೆ ಗೋಕಾಕ ತಾಲೂಕಿನ ಜನತೆಯ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತ ಬಂದಿರುವ ಜಾರಕಿಹೊಳಿ ಮನೆತನದಲ್ಲಿ ಮೂವರು ಜನ ಸಹೋದರರು ಮಂತ್ರಿಗಳಾಗಿದ್ದಾರೆ
ರಾಜಕೀಯ ಪ್ರಭಾವ ಹೊಂದಿರುವ ಈ ಮನೆತನದಲ್ಲಿ ಮದುವೆಯ ಸಂಬ್ರಮ ಲಕ್ಷಾಂತರ ಜನರಿಗೆ ಆಮಂತ್ರಣ ನೀಡಲಾಗಿದೆ ಬೆಳಗಾವಿ ಜಿಲ್ಲೆಯ ಗೋಕಾಕ್ ಅದ್ಧೂರಿ ಮದುವೆಗೆ ಸಾಕ್ಷಿಯಾಗಲಿದೆ
ಗೋಕಾಕಿನ ಸಾಹುಕಾರರ ಮನೆಯಲ್ಲಿ ಮದುವೆ ನಡೆಯುತ್ರಿರುವದರಿಂದ ಇಡೀ ತಾಲೂಕಿನಲ್ಲಿಯೇ ಸಂಬ್ರಮ ಮನೆ ಮಾಡಿದೆ ಅತಿಥಿಗಳಿಗೆ ತರತರಹದ ತಿನಿಸುಗಳನ್ನು ರೆಡಿ ಮಾಡಲು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಭಟ್ಟರು ಗೋಕಾಕಿಗೆ ಆಗಮಿಸಿದ್ದಾರೆ
ಮದುವೆಗಾಗಿಯೇ ಗೋಕಾಕಿನಲ್ಲಿ ನೂರಾರು ಜನ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ