ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ವಸತಿ ಸೈನಿಕ ಶಾಲೆಯಿಂದ 6 ನೇ ತರಗತಿಗಳಿಗೆ ಸೇರಬಯಸುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 1 ರಿಂದ 5 ನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದು ಅಮೆರಿಕಾದ ಸಗೀನಾವ್ ವ್ಯಾಲಿ ವಿಶ್ವ ವಿದ್ಯಾಲಯದ ಡಾ. ಡೇವಿಡ್ ಕ್ಲೈನ್ ತಿಳಿಸಿದರು.
ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆಗಾಗಿಯೇ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಸೈನಿಕ ಶಾಲೆ ಕಿತ್ತೂರಿನಲ್ಲಿದೆ. ಇದ್ದರೊಂದಿಗೆ ಗ್ರಾಮೀಣ ಪ್ರದೇಶದ ಮಕ್ಕಳ ಅನುಕೂಲಕ್ಕಾಗಿ ಸಿಬಿಎಸ್‍ಇ ಪಠ್ಯಕ್ರಮದ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ಅವರನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರ್ಪಡೆಗೊಳಿಸಲು ಸಹಾಯವಾಗಲ್ಲಿದೆ ಎಂದರು.
ಈ ಪ್ರಾಥಮಿಕ ಶಾಲೆಯು ಎಲ್ಲ ಸಿಬಿಎಸ್‍ಸಿ ಶಾಲೆಗಳಿಗಿಂತ ಭಿನ್ನವಾಗಲಿದೆ. 1 ರಿಂದ 5 ನೇ ತರಗತಿವರೆಗೆ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಮಕ್ಕಳಲ್ಲಿ ಪಠ್ಯಕ್ರಮದೊಂದಿಗೆ ದೇಶಪ್ರೇಮ, ಶಿಸ್ತು, ಪಠ್ಯೇತರ ಚಟುವಟಿಕೆಗಳಾದ ಕುದರೆ ಸವಾರಿ, ಕತ್ತಿವರಸೆ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ಡೇವಿಡ್ ಕ್ಲೈನ್ ತಿಳಿಸಿದರು.
ಪ್ರಾಚಾರ್ಯ, ಕರ್ನಲ್ ಆರ್.ಎಸ್.ಖತ್ರಿ, ತೇರೆಸಾ ಕ್ಷೈನ್, ಡಿ.ಎಸ್.ಉಪ್ಪಿನ, ಕಮಲಾ ನಾಯಿಕ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.