ಚೆನ್ನಮ್ಮ ಯನಿವರ್ಸಿಟಿ ಸಿಂಡಿಕೇಟ್ ಸದಸ್ಯರ ನೇಮಕ ಬೆಳಗಾವಿ ಜಿಲ್ಲೆಗೆ ಕೇವಲ ಒಂದು ಸ್ಥಾನ
ಬೆಳಗಾವಿ- ರಾಜ್ಯದಲ್ಲಿರುವ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಮಾನ್ಯ ರಾಜ್ಯಪಾಲರು ಆದೇಶ ಹೊರಡಿಸಿದ್ದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲೆಯ ಏಕೈಕ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದ್ದು ಉಳಿದ ಎಲ್ಲ ಸಿಂಡಿಕೇಟ್ ಸದಸ್ಯರು ಹೊರ ಜಿಲ್ಲೆಯವರಾಗಿದ್ದು ಈ ವಿಷಯದಲ್ಲಿ ಬೆಳಗಾವಿ ಜಿಲ್ಲೆಗೆ ಸರ್ಕಾರ ಮತ್ತು ರಾಜ್ಯಪಾಲರು ಭಾರೀ ಅನ್ಯಾಯ ಮಾಡಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ ಜಿಲ್ಲೆಯಲ್ಲಿದೆ ಆದ್ರೆ ಬೆಳಗಾವಿ ಜಿಲ್ಲೆಗೆ ಕೇವಲ ಒಂದು ಸಿಂಡಿಕೇಟ್ ಸದಸ್ಯತ್ವ ನೀಡಿ ಉಳಿದ ಎಲ್ಲ ಸದಸ್ಯರು ಹೊರ ಜಿಲ್ಲೆಯವರಾಗಿದ್ದಾರೆ.
ಹುಬ್ಬಳ್ಳಿಯ ಹನುಮಂತಪ್ಪಾ ಎಸ್ ಶಿಗ್ಗಾಂವ,ಬೆಂಗಳೂರಿನ. ಡಾ ಶೇಷ ಮೂರ್ತಿ,ಹುಬ್ಬಳ್ಳಿಯ ಡಾ ಶೋಭಾ ಹೂಗಾರ್,ಬೆಳಗಾವಿಯ ಡಾ ಆನಂದ್ ಹೊಸೂರ್,ಹುಬ್ಬಳ್ಳಿಯ ಅಶೋಕ್ ಕುಬ್ಬೇರ್,ಬಾಗಲಕೋಟೆಯ ರಮೇಶ್ ಸವದಿ ಅವರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಈ ಮೊದಲು ಖ್ಯಾತ ಸಾಹಿತಿ,ಮತ್ತು ಪತ್ರಕರ್ತ ಸರಜೂ ಕಾಟ್ಕರ್ ಮತ್ತು ರಾಜು ಜಿಕ್ಕನಗೌಡ್ರ ಅವರು ರಾಣಿ ಚೆನ್ನಮ್ಮ ಯುನಿವರ್ಸಿಟಿಯ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಸಿದ್ದರು.