ಕಿತ್ತೂರು ತಾಲೂಕಿನ ಪ್ರತಿಷ್ಠಿತ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬುಧವಾರ ಚುನಾವಣೆ ನಡೆದಿದ್ದು, ಶೇ 83.6 ಮತದಾನವಾಗಿದೆ.
ಮತದಾನ ಪ್ರಕ್ರಿಯೆ ಮುಗಿದ ನಂತರ ಮತಗಟ್ಟೆಗಳಿಂದ ಎಣಿಕೆ ಕೇಂದ್ರಕ್ಕೆ ಡಬ್ಬಿಗಳನ್ನು ಸಾಗಿಸಲಾಗಿದ್ದು, ಅಲ್ಲಿ ಮತಗಳ ವಿಂಗಡಣೆ ಕಾರ್ಯ ಭರದಿಂದ ಸಾಗಿದೆ.
6 ಎಣಿಕೆ ಟೇಬಲ್ ಹಾಕಲಾಗಿದೆ. ಅಲ್ಲಿ 25 ಮತಗಳ ಕಟ್ ಮಾಡಲಾಗುತ್ತಿದೆ.
ಮತಗಳ ವಿಂಗಡಣೆ ಕಾರ್ಯ ಮುಗಿದ ಕೂಡಲೇ ಮೊದಲು ಮಹಿಳಾ ಸ್ಥಾನಗಳ ಮತಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿ ತಿಳಿಸಿದರು.
9 ಸಾಮಾನ್ಯ, 2ಮಹಿಳೆ, ಹಿಂದುಳಿದ 2 ಅಭ್ಯರ್ಥಿಗಳು, ಎಸ್ಸಿ, ಎಸ್ಟಿ ತಲಾ 1 ಸ್ಥಾನಕ್ಕೆ ಚುನಾವಣೆ ನಡೆದಿದೆ.
ಒಂದು ಗಂಟೆಯಲ್ಲಿ ಮಹಿಳಾ ಅಭ್ಯರ್ಥಿಗಳ ಫಲಿತಾಂಶ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಒಟ್ಟು ಮತಗಳು 2452, ಚಲಾವಣೆಯಾಗಿದ್ದು 2049
ಶೇ 83.6.
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …