2014 ರೇಪ್ ಕೇಸ್… ಆರೋಪಿಗೆ ಜೀವಾವಧಿ ಶಿಕ್ಷೆ……!
ಬೆಳಗಾವಿ-ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ 2014 ಡಿಸೆಂಬರ 22 ರಂದು ನಡೆದ ಅತ್ಯಾಚಾರ ಪ್ರಕಣಕ್ಕೆ ಸಂಭದಿಸಿದ ಆರೋಪಿ ರಾಜು ಭಾಂಧುರ್ಗೆ ಎಂಬಾತನಿಗೆ ಜೀವಾವಧಿ ಶಿಕ್ಷೆ ನೀಡಿ ಮೂರನೇಯ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.
2014ರಂದು ಬೆಳಗಾವಿ ತಾಲೂಕಿನ ಬಾಚಿ ಗ್ರಾಮದಲ್ಲಿ ರಾಜು ಬಾಂಧುರ್ಗೆ ಎಂಬಾತ ಶಾಲೆಗೆ ಹೊರಟಿದ್ದ ಹನ್ನೊಂದು ವರ್ಷದ ಬಾಲೆಗೆ ಚಾಕಲೆಟ್ ಆಮಿಷ ತೋರಿಸಿ ಅತ್ಯಾಚಾರ ವೆಸಗಿದ್ದ ಈ ಪ್ರಕರಣಕ್ಕೆ ಸಂಬದಿಸಿದಂತೆ ವಿಚಾರಣೆ ನಡೆಸಿದ ಮೂರನೇಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಈ ಪ್ರಕರಣಕ್ಕೆ ಸಂಬದಿಸಿದಂತೆ ಸರ್ಕಾರಿ ಅಭಿಯೋಜಕರಾಗಿ ಎಫ್ ಯು ನಾಯಕವಾಡಿ ಅವರು ವಾದ ಮಂಡಿಸಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ