Breaking News

ಅಟೋ ಮೀಟರ್ ,RTO ಅಧಿಕಾರಿಗಳ ವಿರುದ್ಧ ಡಿಸಿ ಗರಂ..

ಬೆಳಗಾವಿ- ಬೆಳಗಾವಿ ನಗರದಲ್ಲಿ ಅಟೋ ಮೀಟರ್ ಕಡ್ಡಾಯಗೊಳಿಸಲು ಕಳೆದ ಮೂರು ವರ್ಷಗಳಿಂದ ನಿರಂತರ ಪ್ರಯತ್ನ ನಡೆದಿದೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಜನ ಸಾಮಾನ್ಯರು ಸರ್ಕಾರಿ ವ್ಯೆವಸ್ಥೆ ಕುರಿತು ಜೋಕ್ ಮಾಡುತ್ತಿದ್ದಾರೆ ಕೂಡಲೇ ನಗರದಲ್ಲಿ ಪೋಲೀಸ್ ಇಲಾಖೆ ಮತ್ತುಆರ್ ಟಿ ಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಅಟೋಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಯರಾಂ ಖಡಕ್ ಆದೇಶ ನೀಡಿದರು

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮೀತಿಯ ಸಭೆಯಲ್ಲಿ ಜಿಲ್ಲಾಧಿಕಾರಿ ಜಯರಾಂ ಅವರು ಅಟೋ ಮೀಟರ್ ಕಡ್ಡಾಯದ ಕುರಿತು RTO ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ನಗರದಲ್ಲಿ ಕೆಲವು ಅಟೋ ಚಾಲಕರು ಪ್ರಯಾಣಿಕರ ಸುಲಿಗೆ ಮಾಡುತ್ತಿದ್ದಾರೆ ಒಂದು ತಿಂಗಳಲ್ಲಿ ನಗರದಲ್ಲಿ ಅಟೋ ಮೀಟರ್ ನೂರಕ್ಕೆ ನೂರರಷ್ಟು ಕಡ್ಡಾಯ ಆಗದಿದ್ದರೆ ಸಮಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿ ಜಯರಾಮ ಅಧಿಕಾರಿಗಳು ಎಚ್ಚರಿಕೆ ನೀಡಿದರು

ಡಿಸಿಪಿ ಅಮರನಾಥ ರೆಡ್ಡಿ ಮಾತನಾಡಿ ನಗರದಲ್ಲಿ ಅಟೋ ಮೀಟರ್ ಹಾಕದ ಚಾಲಕರ ವಿರುದ್ಧ ದೂರು ನೀಡಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ ಮೀಟರ್ ಹಾಕದೇ ಅಟೋ ಚಲಾಯಿಸಿದರೆ ಪ್ರಯಾಣಿಕರು ಪೋಲೀಸರಿಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಮರನಾಥ ರೆಡ್ಡಿ ಹೇಳಿದರು

ಬೆಳಗಾವಿ ನಗರದಲ್ಲಿ 6 ಸಾವಿರಕ್ಕು ಹೆಚ್ವು ಪರ್ಮಿಟ್ ಹೊಂದಿರುವ ರಿಕ್ಷಾಗಳಿವೆ ಕೆಲವರು ಪರ್ಮಿಟ್ ಗಳನ್ನು ರಿನಿವಲ್ ಮಾಡಿಸಿಲ್ಲ ಪರ್ಮಿಟ್ ಇಲ್ಲದ ರಿಕ್ಷಾಗಳು ಅಪಘಾತಕ್ಕೀಡಾದರೆ ಪ್ರಯಾಣಿಕರ ಗತಿ ಏನು ? ಎಂದು ಎಸ್ ಪಿ ರವಿಕಾಂತೇಗೌಡ ಅಟೋ ಘಟನೆಗಳ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

ಒಂದು ತಿಂಗಳಲ್ಲಿ ಬೆಳಗಾವಿ ನಗರದಲ್ಲಿ ಅಟೋ ಮೀಟರ್ ನೂರಕ್ಕೆ ನೂರರಷ್ಟು ಕಡ್ಡಾಯ ಆಗಬೇಕು ಎಲ್ಲ ಅಧಿಕಾರಿಗಳು ಜಂಟಿಯಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಸಿ ತಿಂಗಳಲ್ಲಿ ಈ ಸಮಸ್ಯೆ ತಹಬದಿಗೆ ತರಬೇಕೆಂದು ಡಿಸಿ ಜಯರಾಂ ಸೂಚನೆ ನೀಡಿದರು

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *