Breaking News

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ ಎರಡು ಜೋಡಿಗಳ ನಡುವೆ ಸಮಂಧ ಬೆಳೆಸಿ ಇಬ್ಬರ ಮದುವೆಗೆ ಕಾರಣವಾದ ಅಪರೂಪದ ಘಟನೆ ಕಿತ್ತೂರು ಕ್ರಾಂತಿ ನೆಲದಲ್ಲಿ ನಡೆದಿದೆ

ಕಿತ್ತೂರು ಪಕ್ಕದ ಅಂಬಡಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗ್ರಾಮಸ್ಥರು ಈ ರಾಂಗ್ ನಂಬರ್ ಜೋಡಿಗೆ ಬಸವೇಶ್ವರ ಭಾವ ಚಿತ್ರ ನೀಡಿ ಗೌರವಿಸಿದ್ದಾರೆ

ರಾಂಗ್ ನಂಬರ್ ಮೂಲಕ ಪರಿಚಯವಾದ ಯುವಕ ಯುವತಿ ಕೊನೆಗೆ ಹಸೆಮಣೆ ಏರಿದ ಅಪರೂಪದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಲಾರಿ ಚಾಲಕ ಜಾವೇದ್ ಅಮೀದ್ ಖಾನ್ ಹಾಗೂ ಗುಜರಾತ್ ನ ಅಹ್ಮದಾಬಾದ್ ನ ಮತ್ತೊಬ್ಬ ಲಾರಿ ಚಾಲಕನ ಮಗಳು ರೋಶನ್ ಬಾನು ಹಸೆಮಣಿ ಏರಿದ ಜೋಡಿಗಳು.
ಕಳೆದ ಎರಡು ವರ್ಷಗಳ ಹಿಂದೆ ಅಂಬಡಗಟ್ಟಿ ಗ್ರಾಮದ ಯುವಕ ೨೩ವರ್ಷದ ಜಾವೀದ್ ಗೆ ಅಪರಿಚಿತ ಕಾಲ್ ವೊಂದು ಬಂತು.ಕರೆ ಸ್ವೀಕರಿಸುತ್ತಿದ್ದಂತೆಯೇ ಆ ಕಡೆ ಕರೆ ಮಾಡಿದ ಯುವತಿ ರಾಂಗ್ ನಂ‌ಬರ್ ಸ್ಸಾರಿ ಅಂತ ಫೋನ್ ಕಟ್ ಮಾಡಿದಳು.ಯಾರು ಇರಬಹುದೆಂದ ಕುತೊಹಲಕ್ಕಾಗಿ ಜಾವೀದ್ ಮತ್ತೆ ಅದೇ ನಂಬರ್ ಗೆ ಪೋನ್ ಕರೆ ಮಾಡಿದ್ದಾಗ ಆ ಯುವತಿ ಗುಜರಾತ್ ನ ಅಹಮದಾಬಾದ್ ನ ಬಳಿಯ ಸಂತರಾಂಪುರ ಗ್ರಾಮದ ನಿವಾಸಿ ಅಂತಾ ಗೊತ್ತಾಯಿತು. ಅಷ್ಟೇ ಅಲ್ಲ ಅವಳು ಲಾರಿ ಚಾಲಕನ ಮಗಳು ಅಂತಾನೂ ಗೊತ್ತಾಯಿತು.‌
ರೋಶನ್ ಬಾನು ತನ್ನ ಗೆಳತಿಗೆ ಕರೆ ಮಾಡಲು ಹೋಗಿ ಲೈನ್ ಕ್ರಾಸ್ ಆಗಿ ಆ ಕರೆ ಜಾವೀದ್ ನಂಬರ್ ಗೆ ಬಂದಿತ್ತು. ಒಮ್ಮೆ ಮಾತನಾಡಿದ ನಂತರ ಇಬ್ಬರೂ ಒಬ್ಬರಿಗೊಬ್ಬರು ಪರಿಚಯವಾಗಿ ನಂತರ ಇದೇ ಪರಿಚಯ ಪ್ರೇಮಕ್ಕೆ ತಿರುಗಿತು. ಕಳೆದ ಎರಡು‌ ವರ್ಷಗಳಿಂದ ಪೋನ್ ನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿ ಇತ್ತೀಚಿಗೆ ಮನೆಯಲ್ಲಿ ಹಠ ಹಿಡಿದು ಪೋಷಕರನ್ನ ಕಿತ್ತೂರು ತಾಲೂಕಿನ ಅಂಬಡಗಟ್ಟಿಗೆ ತನ್ನ ಪೋಷಕರೊಂದಿಗೆ ರೋಶನ್ ಬಾನು ಆಗಮಿಸಿ ಜಾವೀದ್ ಮನೆಯವರ ಜೊತೆ ಮಾತನಾಡಿದ್ದಾರೆ. ಮದುವೆ ಮಾಡುವುದಾಗಿ ಎರಡು ಕುಟುಂಬದವರು ಒಪ್ಪಿಗೆ ಸೂಚಿಸಿದರು. ಅದರಂತೆ ಕಳೆದ ಎರಡು ದಿನಗಳ ಹಿಂದೆ ಅಂಬಡಗಟ್ಟಿ ಗ್ರಾಮದಲ್ಲಿರುವ ಸತೀಶ ಜಾರಕಿಹೋಳಿ ಕಲ್ಯಾಣ ಮಂಟಪದಲ್ಲಿ ಎರಡು ಕಡೆ ಪ್ರಮುಖರ ಸಮ್ಮುಖದಲ್ಲಿ ಸರಳ ರೀತಿಯಲ್ಲಿ ವಿವಾಹ ನೆರವೇರಿತು.
ರಾಂಗ್ ನಂಬರ ಕರೆವೊಂದು ಸಿನಿಮೀಯ ರೀತಿಯ ಮದುವೆಯಲ್ಲಿ ಸುಖಾಂತ್ಯಗೊಂಡಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *