ಬೆಳಗಾವಿ- ವಿಪರೀತ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ಥರು ಸೂರು ಕಳೆದುಕೊಂಡು,ಮಂದಿರ ಮಠಗಳಲ್ಲಿ ಆಶ್ರಯ ಪಡೆದಿದ್ದಾರೆ ಈ ಕುರಿತು ಚಿಂತನೆ ಮಾಡಲು ಬಿಜೆಪಿ ನಾಯಕರಿಗೆ ಸಮಯ ಸಿಕ್ಕಿಲ್ಲ,ಪರಿಹಾರ ಎಲ್ಲರಿಗೂ ಮುಟ್ಟಿಲ್ಲ ಬಿಜೆಪಿ ನಾಯಕರು ಹಳ್ಳಿಗಳಿಗೆ ಹೋದಾಗ ಬಿಜೆಪಿ ಬಂಡವಾಳ ಬಯಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಆರ್ ಪಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ,ನ್ಯಾಯವಾದಿ,ಕಾಂಗ್ರೆಸ್ ಮುಖಂಡ ಆರ್ ಪಿ ಪಾಟೀಲ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಿದರು ಆದ್ರೆ ನೆರೆ ಸಂತ್ರಸ್ಥರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಚರ್ಚೆ ಮಾಡಲಿಲ್ಲ,ಎರಡು ವರ್ಷವಾಯಿತು ಬೆಳಗಾವಿಯಲ್ಲಿ ವಿಧಾನ ಮಂಡಳದ ಅಧಿವೇಶನವನ್ನೂ ನಡೆಸಲಿಲ್ಲ,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ಇಚ್ಛಾಶಕ್ತಿ ಬಿಜೆಪಿ ಸರ್ಕಾರಕ್ಕೆ ಇಲ್ಲ.ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಕೋವೀಡ್ ನೆಪ ಹೇಳುವ ಬಿಜೆಪಿ ನಾಯಕರಿಗೆ,ಬೆಳಗಾವಿಯಲ್ಲಿ ಕಾರ್ಯಕಾರಿಣಿ ನಡೆಸುವಾಗ ಕೋವೀಡ್ ನೆನಪಿಗೆ ಬರಲಿಲ್ಲವೇ ಎಂದು ಆರ್ ಪಿ ಪಾಟೀಲ್ ಪ್ರಶ್ನಿಸಿದ್ದಾರೆ.
ಸುಳ್ಳು ಹೇಳುವದೇ ಬಿಜೆಪಿ ಸಾಧನೆಯಾಗಿದೆ.ಅಂಗೈಯಲ್ಲಿ ಅರಮನೆ ತೋರಿಸುವದೇ ಇವರ ಅಜೇಂಡಾ,ನೆರೆ ಸಂತ್ರಸ್ಥರು ಗೋಳಾಡಿದರೂ ಬಿಜೆಪಿ ಸರ್ಕಾರ ಸ್ಪಂದಿಸಲಿಲ್ಲ,ಎಂದು ಆರ್ ಪಿ ಪಾಟೀಲ ಆರೋಪಿಸಿದ್ದಾರೆ.
ಬಿಜೆಪಿ ಹೆಸರಿನಲ್ಲಿ ಕಲ್ಲು ನಿಂತರೂ ಗೆಲ್ಲುತ್ತದೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರು ಮತದಾರರನ್ನು ಅವಮಾನಿಸುತ್ತಿದ್ದು,ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಆರ್ ಪಿ ಪಾಟೀಲ ಹೇಳಿದ್ದಾರೆ.