ಬೆಳಗಾವಿ – ಬೆಳಗಾವಿ ಮಹಾನಗರದಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿದೆ ಮಳೆಗೆ ಎಲ್ಲೆಡೆ ಅಪಾರ ಪ್ರಮಾಣದ ಹಾನಿಯಾಗಿದ್ದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಇಂದು ಬೆಳಗಾವಿ ಉತ್ತರ ಕ್ಷೇತ್ರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿಯ ಪರಿಸ್ಥಿತಿಯನ್ನು ಅವಲೋಕಿಸಿದರು.
ಬೆಳಗಾವಿ ಉತ್ತರ ಕ್ಷೇತ್ರದ ಬಸವನ ಕುಡಚಿ, ಬಿ.ಕೆ ಕಂಗ್ರಾಳಿ ಕ್ಯಾಂಪ್ ಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಸುತ್ತಾಡಿ ಮಳೆಯಿಂದ ಆಗಿರುವ ಮಳೆ ಹಾನಿಯ ಬಗ್ಗೆ ಪರಶೀಲನೆ ಮಾಡಿದರು.

ಮಳೆಯಿಂದ ಸಂಪೂರ್ಣವಾಗಿ ಬಿದ್ದಿರುವ,ಮನೆಗಳ ಪಟ್ಡಿ ಮಾಡಿ, ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ಜರುಗಿಸಬೇಕು, ಈ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ಮಾಡಿದರೆ ಶಿಸ್ತಿನ ಕ್ರಮ ಜರುಗಿಸಲಾಗುವದು ಎಂದು ಶಾಸಕ ಅಸೀಪ್ ರಾಜು ಸೇಠ ಅವರು ಎಚ್ಚರಿಕೆ ನೀಡಿದರು.
ಬೆಳಗಾವಿ ಮಹಾನಗರದಲ್ಲಿ ಮಳೆಯಿಂದ ರಸ್ತೆಗಳಲ್ಲಿ ದೊಡ್ಡ ದೊಡ್ಡ ತಗ್ಗುಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ತುರ್ತಾಗಿ ತಗ್ಗುಗಳನ್ನ ಮುಚ್ಚಬೇಕು, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಶಾಸಕರ ಪುತ್ರ ಅಮನ್ ಸೇಠ ಸಹ ಜೊತೆಗಿದ್ದು ಪಾಲಿಕೆ ಅಧಿಕಾರಿಗಳು ಶಾಸಕರ ಜೊತೆಯಲ್ಲಿ ಸುತ್ತಾಡಿ ಮಳೆ ಹಾನಿಯ ಬಗ್ಗೆ ಶಾಸಕರಿಗೆ ಸಂಪೂರ್ಣವಾದ ಮಾಹಿತಿ ನೀಡಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ