ಬೆಳಗಾವಿ – ರಾಜಧಾನಿ ಬೆಂಗಳೂರಿನಲ್ಲಿ ಈಗ ಬೆಳಗಾವಿ ರಾಜಕಾರಣದ್ದೇ ಚರ್ಚೆ ಎಲ್ಲ ಮಾದ್ಯಮಗಳು ಜಾರಕಿಹೊಳಿ ಸಹೋದರರ ಮೇಲೆ ನಿಗಾ ಇಟ್ಟಿದ್ದು ಸರ್ಕಾರದ ಮೇಲೆ ಬೆಳಗಾವಿ ಜಿಲ್ಲೆ ಪ್ರಭಾವ ಬೀರೀದ್ದು ಜಾರಕಿಹೊಳಿ ಝಲಕ್ ಬೆಳಗಾವಿ ಯಿಂದ ಬೆಂಗಳೂರಿಗೆ ಶಿಪ್ಟ ಆಗಿದೆ
ಜಾರಕಿಹೊಳಿ ಸಹೋದರರು ಬಿಜೆಪಿ ಸೇರ್ತಾರೆ ಎನ್ನುವ ಮಾತು ನಿನ್ನೆ ಕೇಳಿ ಬಂದಿತ್ತು ಆದ್ರೆ ನಿನ್ನೆ ರಾತ್ರಿ ನಾವು ಬಿಜೆಪಿಗೆ ಹೋಗೋಲ್ಲ ಅಂತ ಸಚಿವ ರಮೇಶ ಜಾರಕಿಹೊಳಿ ಹೇಳಿ ಇಡೀ ಘಟನೆಯ ದಿಕ್ಕು ತಪ್ಪಿಸಿದ್ರು
ಆದ್ರೆ ಇಂದು ಬೆಳಿಗ್ಗೆ ಸಚಿವ ರಮೇಶ ಡಿಸಿಎಂ ಪರಮೇಶ್ವರ ಅವರನ್ನು ಭೇಟಿಯಾದ್ರು ಇದರ ಬಳಿಕ ಪರಮೇಶ್ವರ್ ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗೋಲ್ಲ ಅಂದ್ರು ಆದ್ರೆ ಬಿಜೆಪಿ ಸರ್ಕಾರ ಅಸ್ಥಿರ ಗೊಳಿಸುವ ಪ್ರಯತ್ನ ಮಾಡುತ್ತಿದೆ ಅಂತಾ ಪರಮೇಶ್ವರ್ ಆರೋಪಿಸಿದರು
ಸತೀಶ ಜಾರಕಿಹೊಳಿ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದ್ದ ರಮೇಶ ಜಾರಕಿಹೊಳಿ ಈಗ ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿ ಎನ್ನುವ ಬೇಡಿಕೆ ಇಟ್ಟಿರುವ ವಿಷಯ ಈಗ ಮಾದ್ಯಮಗಳಲ್ಲಿ ಪ್ರಸಾರ ಆಗಿದೆ
ಜಾರಕಿಹೊಳಿ ಸಹೋದರರು ನಿಜವಾಗಿಯೂ ಸರ್ಕಾರ ಉಳಿಸುತ್ತಾರಾ ಅಥವಾ ಉರುಳಿಸುತ್ತಾರಾ ಅನ್ನೋದು ಈಗ ಯಕ್ಷ ಪ್ರಶ್ನೆಯಾಗಿದೆ ಜಾರಕಿಹೊಳಿ ಸಹೋದರರ ನಡೆ ಅವರ ರಾಜಕೀಯ ಶಕ್ತಿಯನ್ನು ಅವರ ವರ್ಚಸ್ಸನ್ನು ರಾಜ್ಯದ ಜನರಿಗೆ ತೋರಿಸಲಿದೆ
ಇನ್ನೊಂದು ಕಡೆ ಯಡಿಯೂರಪ್ಪ ಮನೆಗೆ ಜಾರಕಿಹೊಳಿ ಸಹೋದರರ ಆಪ್ತರಾಗಿರುವ ಉಮೇಶ ಕತ್ತಿ, ಪಿ ರಾಜೀವ ಜಗದೀಶ ಶೆಟ್ಟರ್ ಅರವಿಂದ ಬೆಲ್ಲದ ಸೇರಿತೆ ಹಲವಾರು ಜನ ನಾಯಕರು ಧಾವಿಸಿದ್ದಾರೆ ನಿಜವಾಗಿಯೂ ಜಾರಕಿಹೊಳಿ ಬ್ರದರ್ಸ ತಮ್ಮ ವರಸೆ ತೋರಿಸುತ್ತಾರಾ ಬಿಜೆಪಿ ಜಾರಕೊಹೊಳಿ ಬೆಂಬಲ ಪಡೆದು ಸಮ್ಮೀಶ್ರ ಸರ್ಕಾರವನ್ನು ಖಲ್ಲಾಸ್ ಮಾಡುತ್ತಾ ? ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಜಾರಕಿಹೊಳಿ ಸಹೋದರರ ವಿರುದ್ಧ ಕ್ರಮ ಕೈಗೊಳ್ಳುತ್ತಾ ? ಕಾದು ನೋಡಬೇಕಿದೆ
ಸಂಸದ ಸುರೇಶ ಅಂಗಡಿ ಹದಿನೈದು ದಿನದಲ್ಲಿ ಸರ್ಕಾರ ಬೀಳುತ್ತೆ ಅಂತ ಹೇಳಿದ್ರು ಪ್ರಭಾಕರ ಕೋರೆ ಬೆಳಗಾವಿ ಜಿಲ್ಲೆಯ ಜನರಿಗೆ ಸರ್ಕಾರ ಮಾಡೋದು ಗೊತ್ತು ಉರಳಿಸೋದು ಗೊತ್ತು ಎಂದು ಹೇಳಿದ್ದರು ಇದಕ್ಕೆ ಪೂರಕವಾಗಿ ಈಗ ರಾಜಧಾನಿಯಲ್ಲಿ ಅನೇಕ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ
ಒಟ್ಟಾರೆ ರಾಜಧಾನಿಯಲ್ಲಿ ಜಾರಕಿಹೊಳಿ ಸಹೋದರರು ತಮ್ಮ ಝಲಕ್ ತೋರಿಸುತ್ತಿದ್ದಾರೆ ಇದಕ್ಕೆ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರ ಎರಡೂ ಹೈರಾಣಾಗಿದೆ ಸಹೋದರರು ಎಷ್ಟರ ಮಟ್ಟಿಗೆ ಸರ್ಕಾರ ಅಲುಗಾಡಿಸುವಲ್ಲಿ ಯಶಸ್ವಿ ಆಗ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ
ಬೆಳಗಾವಿ ಜಿಲ್ಲೆಯ ತಾಕತ್ತು ಈಗ ರಾಜಧಾನಿ ಬೆಂಗಳೂರನ್ಮೇ ನಡುಗಿಸಿದೆ ಸಿಎಂ ಡಿಸಿಎಂ ನಿದ್ದೆ ಹಾರಿ ಹೋಗಿದೆ ಆಂತರಿಕವಾಗಿ ಏನೋ ನಡೆಯುತ್ತಿದೆ ಸರ್ಕಾರಕ್ಲೆ ಕಂಟಕ ಕಾದಿರುವದು ಸತ್ಯ